ಫೆ.8 ರಿಂದ ಬ್ಯಾರಿ ಮೇಳ: ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ
ಮಂಗಳೂರು, ಜ.30: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಇದರ ವತಿಯಿಂದ ಫೆಬ್ರವರಿ 8,9 ಮತ್ತು 10 ರಂದು ಮಂಗಳೂರು ಪುರಭವನದಲ್ಲಿ ಬ್ಯಾರಿ ಮೇಳ ನಡೆಯಲಿದೆ.
ಇದರ ಅಂಗವಾಗಿ ಜನವರಿ 10 ಆದಿತ್ಯವಾರ ಪೂರ್ವಾಹ್ನ ಗಂಟೆ 10.30 ರಿಂದ 12.30 ರತನಕ ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ ‘ಅ ಡೇ ವಿದ್ ಸಕ್ಸಸ್‍ಫುಲ್ ಬಿಸ್‍ನೆಸ್‍ಮೆನ್’ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗೈದ ದೇಶ ವಿದೇಶಗಳ ಯಶಸ್ವಿ ಉದ್ಯಮಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ವ್ಯಾಪಾರ ರಂಗದಲ್ಲಿರುವವರಿಗೆ ಹಾಗೂ ವ್ಯಾಪಾರ ಆಸಕ್ತರಿಗೆ ಸದರಿ ಕಾರ್ಯಕ್ರಮವು ಬಹಳಷ್ಟು ಪ್ರೇರಣೆ ನೀಡಲಿದೆ. ಆದುದರಿಂದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ ಅಧ್ಯಕ್ಷ ಹಾಜಿ ಎಸ್.ಎಂ ರಶೀದ್ ಮತ್ತು ಬ್ಯಾರಿ ಮೇಳದ ಸಂಚಾಲಕ ಮನ್ಸೂರ್ ಅಹಮದ್ ಆಝಾದ್ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 0824-4262323, 9535563897 ಸಂಪರ್ಕಿಸಲು ತಿಳಿಸಿದ್ದಾರೆ.