×
Ad

ಮಂಗಳೂರು: ಬಟ್ಟೆ ಮಳಿಗೆಯ ಜನರೇಟರ್‌ಗೆ ಬೆಂಕಿ

Update: 2019-01-30 21:39 IST

ಮಂಗಳೂರು, ಜ.30: ನಗರದ ಕ್ಲಾಕ್‌ ಟವರ್‌ನ ಸಮೀಪದ ಬಟ್ಟೆ ಮಳಿಗೆಯೊಂದರ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಹೊತ್ತು ಭೀತಿ ಮೂಡಿದ ಘಟನೆ ಬುಧವಾರ ರಾತ್ರಿ 8 ಗಂಟೆಗೆ ನಡೆದಿದೆ.

ಜನರೇಟರ್‌ನಲ್ಲಿ ಬೆಂಕಿ ನೋಡಿದ ಟ್ರಾಫಿಕ್ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದರೆ ಅಗ್ನಿಶಾಮಕ ಬರುವ ಮೊದಲೇ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದರು. ಮಳಿಗೆಯಲ್ಲಿ ಹಾನಿಯಾದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News