×
Ad

ಪೊಲೀಸರ ಕರ್ತವ್ಯ ಅಡ್ಡಿ: ದೂರು

Update: 2019-01-30 22:21 IST

ಗಂಗೊಳ್ಳಿ, ಜ.30: ಗಂಗೊಳ್ಳಿ ಮಹಂಕಾಳಿ ಮಾರಿಕಾಂಬಾ ದೇವಸ್ಥಾನದ ಜಾತ್ರೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.29ರಂದು ಮಧ್ಯರಾತ್ರಿ ವೇಳೆ ಗಂಗೊಳ್ಳಿ ಪೇಟೆಯಲ್ಲಿ ಬೈಂದೂರು ಪೊಲೀಸ್ ಠಾಣಾ ಕೇಶವ ಮತ್ತು ಗಂಗೊಳ್ಳಿ ಪೊಲೀಸ್ ಠಾಣಾ ಮಂಜುನಾಥ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಅಲ್ಲಿಗೆ ನವೀನ ಎಂಬಾತ ಬೈಕಿನಲ್ಲಿ ಬಂದ ಎನ್ನಲಾಗಿದೆ. ಪೊಲೀಸರು ಬೈಕ್‌ನ್ನು ತಡೆದು, ಬೈಕ್‌ನ್ನು ಇಲ್ಲೇ ನಿಲ್ಲಿಸಿ ನಡೆದು ಕೊಂಡು ಹೋಗುವಂತೆ ಸೂಚಿಸಿದರು. ಅದಕ್ಕೆ ನವೀನ್ ಬೈಕ್‌ನ್ನು ರಸ್ತೆಯ ಬದಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಪೊಲೀಸ್ ಸಿಬ್ಬಂದಿಗಳನ್ನು ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News