ಜ.31: ಮಳ್ಹರ್ ನಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್
ಮಂಜೇಶ್ವರ,ಜ.30: ಮಳ್ಹರ್ ನೂರಿಲ್ ಇಸ್ಲಾಮಿತ್ತಅ್ ಲೀಮಿಯ ಅಧೀನದಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಜ.31 ರಂದು ಗುರುವಾರ ಮಗ್ರಿಬ್ ನಮಾಝಿನ ನಂತರ ಮಳ್ಹರ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಮಳ್ಹರ್ ಉಪಾಧ್ಯಕ್ಷ ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ನೇತೃತ್ವ ವಹಿಸುವರು. ಮುಹಿಯದ್ದೀನ್ ಬಾಖವಿ ಅಲ್ ಕಾಮಿಲಿ ಎರ್ನಾಂಕುಳಂ ಮುಖ್ಯಭಾಷಣ ಮಾಡುವರು. ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ, ಸಯ್ಯಿದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಉಜಿರೆ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬ್, ಬಿ.ಎಸ್ ಅಬ್ದುಲ್ಲ ಕುಂಞ ಫೈಝಿ, ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿ, ಮೂಸಲ್ ಮದನಿ ಅಲ್ ಬಿಶಾರ, ಸುಲೈಮಾನ್ ಕರಿವೇಳ್ಳೂರ್, ಮುಹಮ್ಮದ್ ಸಖಾಫಿ ಪಾತೂರ್, ಹಸನ್ ಸಅದಿ ಅಲ್ ಅಪ್ಳಲಿ, ಉಮರುಲ್ ಪಾರೂಖ್ ಮದನಿ ಮಚ್ಚಂಪಾಡಿ, ಅಬೂಬಕ್ಕರ್ ಸಿದ್ದೀಖ್ ಸಅದಿ ತೌಡುಗೋಳಿ, ಝಬೈರ್ ಸಖಾಫಿ ವಟ್ಟೋಳಿ, ಅಬ್ದುಲ್ ಸಲಾಂ ಮಿಸ್ಬಾಹಿ, ಕುಂಞ್ಞಾಲಿ ಸಖಾಫಿ ಕೋಟ್ಟುರು, ಉಸ್ಮಾನ್ ಹಾಜಿ ಮಳ್ಹರ್, ಹಸನ್ ಕುಂಞ ಮಳ್ಹರ್, ಕೆ.ಎಂ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ,ಬಶೀರ್ ಮಾಸ್ಟರ್ ಪುಳಿಕ್ಕೂರ್ ಮುಂತಾದವರು ಭಾಗವಹಿಸುವರು.
ಮದ್ಯಾಹ್ನ 2 ಗಂಟೆಗೆ ನಡೆಯುವ ಮಹಿಳಾ ತರಬೇತಿ ಹಾಗೂ ಆತ್ಮೀಯ ಸಂಗಮಕ್ಕೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ನೇತೃತ್ವ ನೀಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.