ಫೆ.4: ಲಕ್ಷ್ಮೀಶ ತೋಳ್ಪಾಡಿ ವಿಶೇಷ ಉಪನ್ಯಾಸ
Update: 2019-01-31 21:36 IST
ಉಡುಪಿ, ಜ.31: ಪ್ರಸಿದ್ಧ ವಿದ್ವಾಂಸ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಫೆ.4ರ ಸೋಮವಾರ ಸಂಜೆ 5:30ಕ್ಕೆ ನಡೆಯಲಿದೆ.
ತೋಳ್ಪಾಡಿ ಅವರು ‘ಕ್ರೌಂಚ ಪ್ರಸಂಗ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಶ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.