ಫೆ.4: ಸಂತ ಆಗ್ನೆಸ್ ಕಾಲೇಜಿನಲ್ಲಿ ಪರಿಸರ ಕುರಿತ ವಿಚಾರ ಸಂಕಿರಣ

Update: 2019-01-31 17:33 GMT

ಮಂಗಳೂರು, ಜ.31: ಸಂತ ಆಗ್ನೆಸ್ ಕಾಲೇಜಿನ ಕನ್ನಡ ಸಂಘವು ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ರಾಜ್ಯಮಟ್ಟದ ಪರಿಸರ ಕುರಿತ ವಿಚಾರ ಸಂಕಿರಣವನ್ನು ಫೆ.4ರಂದು ಆಗ್ನೆಸ್ ಕಾಲೇಜಿನಲ್ಲಿ ಏರ್ಪಡಿಸಿದೆ.

‘ಪರಿಸರ: ವರ್ತಮಾನದ ತಲ್ಲಣಗಳು’ ಎಂಬ ವಿಷಯದ ಮೇಲೆ ನಡೆಯುವ ವಿಚಾರ ಸಂಕಿರಣವನ್ನು ಪರಿಸರ ಚಿಂತಕ ಜಿ.ಎನ್.ಅಶೋಕವರ್ಧನ್ ಉದ್ಘಾಟಿಸಲಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಕರ್ ಡಿ.ಪುರಾಣಿಕ, ಆಕಾಶವಾಣಿ ನಿಲಯ ನಿರ್ದೇಶಕಿ ಎಸ್. ಉಷಾಲತಾ, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಪ್ರಾಂಶುಪಾಲೆ ಡಾ.ಸಿ.ಎಂ.ಜೆಸ್ವಿನಾ ಎ.ಸಿ. ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಕೃಷ್ಣಮೂರ್ತಿ ಪಿ. ಅಧ್ಯಕ್ಷತೆಯಲ್ಲಿ ಪರಿಸರ ತಜ್ಙ ಡಾ.ಎಚ್. ಜಯಂತ ಸಮಾರೋಪ ಭಾಷಣ ಮಾಡಲಿದ್ದಾರೆ. ಪರಿಸರ ಚಿಂತಕ, ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅಧ್ಯಕ್ಷತೆಯಲ್ಲಿ ‘ಕರಾವಳಿಯ ಕೃಷಿ ಪರಿಸರ: ತಲ್ಲಣಗಳು, ಪರಿಣಾಮಗಳು’, ಪರಿಸರ ಅಧಿಕಾರಿ ಜಯಪ್ರಕಾಶ ನಾಯಕ್ ಅಧ್ಯಕ್ಷತೆಯಲ್ಲಿ ‘ಪರಿಸರ ಕಾಯ್ದೆಗಳು ಮತ್ತು ಅನುಷ್ಠಾನ’ ಪರಿಸರ ತಜ್ಙ, ಪ್ರಾಧ್ಯಾಪಕ ಡಾ.ಜಯಕರ ಭಂಡಾರಿ ಅಧ್ಯಕ್ಷತೆಯಲ್ಲಿ ‘ಪರಿಸರ ಸಮಸ್ಯೆಗಳು ಮತ್ತು ನೈತಿಕ ಪ್ರಜ್ಞೆ’ ಗೋಷ್ಠಿಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News