×
Ad

ಪರ್ಲಿಯಾ: ಫೆ. 2, 3ರಂದು 'ಬಾಬರಿ ಎಕ್ಸ್-ಪೋ'

Update: 2019-01-31 23:46 IST

ಬಂಟ್ವಾಳ, ಜ. 31: ಎಸ್ಡಿಪಿಐ ಬಂಟ್ವಾಳ ತಾಲೂಕು ಇದರ ವತಿಯಿಂದ 'ಬಾಬರಿ ಮಸ್ಜಿದ್ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ' ಎಂಬ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಫೆ. 2, 3ರಂದು ಬಾಬರಿ ಎಕ್ಸ್-ಪೋ ಎಂಬ ಸಾಂಸ್ಕ್ರತಿಕ ಕಾರ್ಯಕ್ರಮ ಕೈಕಂಬದ ಪರ್ಲಿಯಾ ವಾಲಿಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ.  

ಕ್ವಿಝ್ ಕಾರ್ಯಕ್ರಮ, ಚಿತ್ರ ಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪಿಕ್ ಆಂಡ್ ಸ್ಪೀಚ್ ಹಾಗೂ ಎಕ್ಸಿಬಿಷನ್, ಬಾಬರಿ ಮಸೀದಿಯ ಸಂದೇಶವನ್ನು ಸಾರುವ ಕಿರು ನಾಟಕ ಹಾಗೂ ಸ್ಥಳೀಯ ಸಂಪನ್ಮೂಲ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ ಎಂದು ಎಸ್ಡಿಪಿಐ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News