ಉಡುಪಿ: ಚಿಣ್ಣರ ಸಂತರ್ಪಣೆಯ ಸಮಾರೋಪ
ಉಡುಪಿ, ಫೆ.1: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಒಂದು ತಿಂಗಳ ಕಾಲ ನಡೆದ ಚಿಣ್ಣರ ಮಾಸೋತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣೆಯು ಶುಕ್ರವಾರ ರಾಜಾಂಗಣದಲ್ಲಿ ನಡೆಯಿತು.
ಪರ್ಯಾಯ ಪಲಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಆಟ ಪಾಠಗಳೆಲ್ಲ ಶಾಲೆಯಲ್ಲಿ ನಡೆಯುತ್ತವೆ. ಆದರೆ ಮಕ್ಕಳಲ್ಲಿ ರುವ ಕಲಾ ಪ್ರತಿಭೆಯನ್ನು ಪ್ರದರ್ಶನ ಮಾಡಲು ಇಲ್ಲಿ ಅವಕಾಶ ದೊರೆಯುತ್ತಿದೆ. ಇದರಿಂದ ಮಕ್ಕಳ ಮನಸ್ಸಿನ ಉತ್ತವ ು ಬೆಳವಣಿಗೆ ಆಗುತ್ತದೆ ಎಂದರು.
ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಟಿ.ವಿ.ಎಸ್ ಕಂಪನಿ ನಿರ್ದೇಶಕ ರಾಧಾಕೃಷ್ಣ, ಮಂಗಳೂರು, ಉದ್ಯಮಿ ಇಂದಿರಾ ರವಿಚಂದ್ರನ್, ಚಿಣ್ಣರ ಸಂತರ್ಪಣೆ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಮಾಡ, ತೀರ್ಪುಗಾರರಾದ ನಾರಾಯಣ ಹಾಗೂ ಅಜಿತ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪರ್ಯಾಯ ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಉದಯ ಮಯ್ಯ ಕಾರ್ಯಕ್ರಮ ನಿರೂಪಿಸಿ, ಚಿಣ್ಣರ ಸಂತರ್ಪಣೆ ಒಕ್ಕೂಟದ ಕಾಯದರ್ರ್ಶಿ ಶ್ರೀನಿವಾಸ ರಾವ್ ವಂದಿಸಿದರು.