×
Ad

‘ಪುಂಡಿಪಣವು’ ಕರಾವಳಿಯಾದ್ಯಂತ ತೆರೆಗೆ

Update: 2019-02-01 21:37 IST

ಮಂಗಳೂರು, ಫೆ.1: ತವಿಷ್ ಎಂಟರ್‌ಪ್ರೈಸಸ್ ಲಾಂಛನದಲ್ಲಿ ರಾಮಕೃಷ್ಣ ಶೆಟ್ಟಿ ನಿರ್ಮಿಸಿದ ಗಂಗಾಧರ ಕಿರೋಡಿಯನ್ ನಿರ್ದೇಶನದ ‘ಪುಂಡಿಪಣವು’ತುಳು ಚಲನ ಚಿತ್ರದ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ನಡೆಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು. ತುಳು ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಚಲನ ಚಿತ್ರ ನಿರ್ಮಾಪಕರಾದ ಡಾ. ಸಂಜೀವ ದಂಡೆಕೇರಿ, ಪ್ರಕಾಶ್ ಪಾಂಡೇಶ್ವರ್, ರಾಮಕೃಷ್ಣ ಶೆಟ್ಟಿ, ಸಂಗೀತ ನಿರ್ದೇಶಕ ಚಂದ್ರಕಾಂತ್ ಎಸ್.ಪಿ, ನಿರ್ದೇಶಕರಾದ ಗಂಗಾಧರ ಕಿರೋಡಿಯನ್, ವಿ.ಜಿ ಪಾಲ್, ತಮ್ಮ ಲಕ್ಷ್ಮಣ್, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕಿಶೋರ್ ಡಿ. ಶೆಟ್ಟಿ, ತುಳುಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಮಧು ಸುರತ್ಕಲ್, ಆರ್.ಎನ್. ಶೆಟ್ಟಿ ಕಲವಾರು, ಸತೀಶ್ ಶೆಟ್ಟಿ ಎಕ್ಕಾರ್, ಕೀರ್ತಿರಾಜ್ ಶೆಟ್ಟಿ, ವಸಂತ ಪೂಜಾರಿ, ಅಶೋಕ್ ಮಾಡ, ಸುಧೀರ್ ಭಂಡಾರಿ, ಜಯಶೀಲ, ಜಯಾನಂದ ಅಮೀನ್, ಸುರೇಶ್ ದೇವಾಡಿಗ ಕದ್ರಿ ಉಪಸ್ಥಿತರಿದ್ದರು.

ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News