ಮುಅಲ್ಲಿಂ ಫೆಸ್ಟ್-2019: ಬೆಂಗರೆ ಮದ್ರಸ ಚಾಂಪಿಯನ್
Update: 2019-02-01 21:42 IST
ಮಂಗಳೂರು, ಫೆ.1: ಮಂಗಳೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಬೆಂಗರೆಯಲ್ಲಿ ಇತ್ತೀಚಿಗೆ ನಡೆದ ಮುಅಲ್ಲಿಂ ಫೆಸ್ಟ್ 2019ರಲ್ಲಿ ವಿವಿಧ ವಿಷಯಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಂಗರೆ ಅಲ್ ಮದ್ರಸತುದ್ದೀನಿಯ್ಯ ಅಧ್ಯಾಪಕರು ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಶಿಪ್ ತನ್ನದಾಗಿಸಿಗೊಂಡಿದ್ದಾರೆ.
ಸ್ಪರ್ಧೆಯಲ್ಲಿ ಅಧ್ಯಾಪಕರಾದ ಪಿ.ಎಂ. ಮುಹಮ್ಮದ್ ರಫೀಖ್ ಅಜ್ಜಾವರ, ಶಾಹುಲ್ ಹಮೀದ್ ಮೌಲವಿ ಐವರ್ನಾಡು, ಹಾರಿಸ್ ಯಮಾನಿ ಪಾಜಪಲ್ಲ, ಎ.ಕೆ. ಮುಹಮ್ಮದ್ ಮಸ್ಲಿಯಾರ್ ಅರ್ಕಾಣ, ಸಲೀಂ ಯಮಾನಿ ಬೋಳಂತೂರು, ಶಫೀಉಲ್ಲಾ ದಾರಿಮಿ ಕಡಬ ಭಾಗವಹಿಸಿದ್ದರು.