ಕೋಟೆಕಾರ್: ಸ್ವಲಾತ್ ವಾರ್ಷಿಕ ಪ್ರಯುಕ್ತ ಫೆ.4 ರಿಂದ ಧಾರ್ಮಿಕ ಪ್ರವಚನ
Update: 2019-02-01 22:20 IST
ಮಂಗಳೂರು,ಫೆ.1: ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ವತಿಯಿಂದ ಪ್ರತೀವಾರ ನಡೆಯುವ ಸ್ವಲಾತಿನ 19 ನೇ ವಾರ್ಷಿಕ ಕಾರ್ಯಕ್ರಮವು ಫೆ.4 ರಿಂದ 6 ರ ತನಕ ಉಮರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅಹ್ಮದ್ ಕಬೀರ್ ಸಅದಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸೆಯ್ಯದ್ CTM ಸಲೀಂ ಅಸ್ಸಖಾಫ್ ತಂಙಲ್ ಕೆಸಿ ರೋಡ್ ಪ್ರಾರ್ಥನೆಗೈಯ್ಯಲಿದ್ದಾರೆ. ಉಡುಪಿ, ದ.ಕ ಸಂಯುಕ್ತ ಖಾಝಿ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಕೆಪಿ ಹುಸೈನ್ ಸಅದಿ ಕೆಸಿ ರೋಡ್ ಪ್ರವಚನ ನೀಡಲಿದ್ದಾರೆ.
ಫೆ.6 ರಂದು ಬುಧವಾರ ಮಗ್ರಿಬ್ ನಮಾಝ್ ಬಳಿಕ ಸೆಯ್ಯದ್ ಫಝಲ್ ಕೋಯಮ್ಮ ತಂಙಲ್ ರವರ ನೇತೃತ್ವದಲ್ಲಿ ಬೃಹತ್ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಸಚಿವ ಯು.ಟಿ ಖಾದರ್ ಹಾಗೂ ಇನ್ನಿತರ ಉಲಮಾ, ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.