ಮೋದಿ ಸರಕಾರ ನಿರುದ್ಯೋಗದ ದತ್ತಾಂಶ ಮುಚ್ಚಿಡಬಹುದು, ಸತ್ಯವನ್ನಲ್ಲ

Update: 2019-02-01 17:09 GMT

ಹೊಸದಿಲ್ಲಿ, ಫೆ. 1: ಭಾರತದ ನಿರುದ್ಯೋಗದ ಬಗ್ಗೆ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಕಳವಳ ವ್ಯಕ್ತಪಡಿಸಿದ್ದಾರೆ. ದೊಡ್ಡ ಸಂಸ್ಥೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿರುವುದಕ್ಕೆ ಹಾಗೂ ಸಣ್ಣ ಸಂಸ್ಥೆಗಳನ್ನು ನಿರ್ಲಕ್ಷಿಸಿರುವುದಕ್ಕೆ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರಕಾರ ಅಧಿಕೃತ ದತ್ತಾಂಶವನ್ನು ತಡೆಹಿಡಿದ ಹೊರತಾಗಿಯೂ ಉದ್ಯೋಗ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ವಿಶ್ಲೇಷಕರು ಖಾಸಗಿ ಮೂಲಗಳು ಹಾಗೂ ಪರೋಕ್ಷ ಪುರಾವೆಗಳನ್ನು ಅವಲಂಬಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬರೆದ ಲೇಖನವೊಂದರಲ್ಲಿ ಬಸು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇಂಡಿಯನ್ ಕ್ಯಾನ್ ಹೈಡ್ ಅನ್‌ಎಂಪ್ಲಾಯ್‌ಮೆಂಟ್ ಡಾಟಾ, ಬಟ್ ನಾಟ್ ಟ್ರೂಥ್’ ಹೆಸರಿನಲ್ಲಿ ಈ ಲೇಖನ ಪ್ರಕಟವಾಗಿದೆ. ಬಸು ಅವರು ವಿಶ್ವ ಬ್ಯಾಂಕ್‌ನ ಮಾಜಿ ಮುಖ್ಯ ಆರ್ಥಿಕ ತಜ್ಞ. ಅವರು 2009ರಿಂದ 2012ರ ವರೆಗೆ ಭಾರತ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ರೀತಿ ಮಾಹಿತಿ ಬಹಿರಂಗ ಪಡಿಸುವುದಕ್ಕೆ ತಡೆ ಒಡ್ಡುವುದು ಈ ಹಿಂದೆ ಅಂಕಿ-ಅಂಶ ಸಂಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿರುವುದಕ್ಕೆ ಪ್ರಶಂಸೆಗೆ ಒಳಗಾದ ಭಾರತಕ್ಕೆ ಒಗ್ಗದು. ಅಧಿಕೃತ ದತ್ತಾಂಶ ಇಲ್ಲದೇ ಇದ್ದಾಗ, ಖಾಸಗಿ ಅಧ್ಯಯನಗಳ ವರದಿ ನೀಡಿದ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಸು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News