ಬಹುಭಾಷೆಯ ಕಲಿಕೆಯಿಂದ ಸಾಮರಸ್ಯ ಸಾಧ್ಯ-ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ
ಮಂಗಳೂರು, ಫೆ.1: ಬಹುಭಾಷೆಯ ಕಲಿಕೆಯಿಂದ ಸಾಮರಸ್ಯ ಸಾಧ್ಯ. ಭಾಷೆ ಸಂಸ್ಕೃತಿಯ ಭಂಡಾರವಿದ್ದಂತೆ ಎಂದು ಮಂಗಳೂರು ಕಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಪೀಟರ್ ಪೌಲ್ ಸಲ್ದಾನ ತಿಳಿಸಿದರು.
ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಬಲ್ಮಠ ಇದರ50ನೆ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾಸೆಸ್ 50 ಸಾಮರಸ್ಯ -2019ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಭಾರತದ ಬಹು ಭಾಷೆ ಬಹು ಸಂಸ್ಕೃತಿಯನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಇರಬೇಕಾದರೆ ಒಬ್ಬರು ಇನ್ನೊಬ್ಬರ ಭಾಷೆ,ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅವರೊಂದಿಗೆ ಪರಸ್ಪರ ಪ್ರೀತಿ,ವಿಶ್ವಾಸ,ಗೌರವದಿಂದ ಬದುಕುವುದು ಮುಖ್ಯ.ಒಂದು ಸಮುದಾಯದ ಸಂಸ್ಕೃತಿಯನ್ನು ತಿಳಿಯಬೇಕಾದರೆ ಆ ಸಮುದಾಯದ ಭಾಷೆಯನ್ನು ತಿಳಿದುಕೊಳ್ಳುವುದು ಹೆಚ್ಚು ಸೂಕ್ತ ಎಂದು ಬಿಷಪ್ ತಿಳಿಸಿದರು.
*ಧಾರ್ಮಿಕತೆಯೊಂದಿಗೆ ಬದುಕುವುದರಿಂದ ಸಾಮರಸ್ಯ ಸಾಧ್ಯ:-ಭಾರತದಲ್ಲಿ ಸಾಕಷ್ಟು ಜಾತಿ,ಮತ,ಧರ್ಮದ ಜನರು ತಮ್ಮ ತಮ್ಮ ಮತ, ಧರ್ಮಗಳೊಂದಿಗೆ ಬದುಕುತ್ತಿದ್ದಾರೆ. ಅದರೊಂದಿಗೆ ತಮ್ಮನ್ನು ಗುರುತಿಸಿಕೊಂಡು ಅವರೆ ನೆಲೆಯ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ತೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವಾ ತಿಳಿಸಿದ್ದಾರೆ.
ದೇಶ ಬಹುಸಂಸ್ಕೃತಿಯೊಂದಿಗೆ ಆಹಾರ,ಉಡುಗೆ ತೊಡಗೆಗಳಲ್ಲಿ ಯೂ ವೈವಿಧ್ಯತೆಯಿಂದ ಕೂಡಿದೆ.ಮಾತ್ರವಲ್ಲ ಈ ಬಹು ಸಂಸ್ಕೃತಿ ನಮ್ಮನ್ನು ಒಂದು ಗೂಡಿಸಿದೆ.ಆ ಮೂಲಕ ಒಂದು ರೀತಿಯ ಸಂತೃಪ್ತಿಯೂ ಇದೆ.ಈ ರೀತಿಯ ಸಂಸ್ಕೃತಿ ಇರುವುರಿಂದ ಈ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇದೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಧರ್ಮ, ಸಾಂಸ್ಕೃತಿಕ ಚಿಂತನೆಗಳು ಬಹುತ್ವದಿಂದ ಕೂಡಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವೂದೇ ಸಂದೇಶಗಳಿಲ್ಲದೆ ಒಂದು ರೀತಿಯ ದೈಹಿಕ ಕಸರತ್ತಿನ ಕಾರ್ಯಕ್ರಮಗಳಾಗಿ ಕಂಡು ಬರುತ್ತವೆ. ನಮ್ಮ ದೇಶದಲ್ಲಿ ಕಲೆ,ಸಂಸ್ಕೃತಿ,ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿನ ಜನರ ಬದುಕಿನ ಅಂಗಗಳಾಗಿವೆ ಎಂದು ಡಾ.ಮೋಹನ್ ಆಳ್ವಾ ತಿಳಿಸಿ 50 ವರ್ಷದ ಕಾಸಸ್ ಸಂಸ್ಥೆಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಸಸ್ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಆರ್.ಕಬ್ರಾಲ್ ವಹಿಸಿದ್ದರು.ರೀನಾ ಕೋಟ್ಯಾನ್ ಸ್ವಾಗತಿಸಿದರು.ವಿಜಯ ಅಮ್ಮನ್ನ ವಂದಿಸಿದರು. ಕಾಸಸ್ ಸಾಮರಸ್ಯದ ಅಂಗವಾಗಿ ಕಾಸಸ್ ಸಂಸ್ಥೆಗಳ ಪ್ರದರ್ಶನ, ಉತ್ಪಾದನೆಗಳ ಮಾರಾಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಕೆ.ಪಿ.ರೈ ಯವರ ಪ್ರಾಚೀನ ಕರಾವಳಿಯ ವಸ್ತುಗಳ ಪ್ರದರ್ಶನ,ಅಪೂರ್ವ ದ್ವಿಚಕ್ರವಾಹನಗಳ ಪ್ರದರ್ಶನ,ಬಾಸೆಲ್ ಮಿಶನ್‌ನ ಹಂಚಿನ ಕಾರ್ಖಾನೆಯ ವಸ್ತುಗಳ ಪ್ರದರ್ಶನ, ಸಿ.ಅರ್ಹನ್ನ,ಶ್ರೀವಿಲಿಯಂ ಪಾಯ್ಸಿರವರ ಚಿತ್ರ ಪ್ರದರ್ಶನ ಆಹಾರೋತ್ಸವ, ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.