ಕೇಂದ್ರ ಸರಕಾರದ ಬಜೆಟ್‌ಗೆ ಪ್ರತಿಕ್ರಿಯೆಗಳು
ಅಭಿವೃದ್ಧಿಶೀಲ ರಾಷ್ಟ್ರದ ಹೆಗ್ಗುರುತು
ಕಾರ್ಮಿಕರಿಗೆ ನೆರವು, ರೈತರಿಗೆ ಸಿಹಿಸುದ್ದಿ, ಅಂಗನವಾಡಿ, ಆಶಾ ಕಾರ್ಯ ಕರ್ತೆಯರಿಗೆ ಆರ್ಥಿಕ ಶಕ್ತಿ, ಮೀನುಗಾರರು ಹೈನುಗಾರರಿಗೆ ಭದ್ರತೆ, ಸೈನಿಕರಲ್ಲಿ ವಿಶ್ವಾಸ, ಆದಾಯ ತೆರಿಗೆ ಮಿತಿ ದ್ವಿಗುಣ ಒಟ್ಟಾರೆ ಅಭಿವೃಧ್ಧಿಶೀಲ ರಾಷ್ಟ್ರದ ಹೆಗ್ಗುರುತು ಈ ಬಜೆಟ್.
-ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನ ಪರಷತ್.
ಸ್ವಾಗತಾರ್ಹ ಬಜೆಟ್
ದೇಶದ ಹಿತದೃಷ್ಟಿಯಿಂದ ಪಿಯೂಷ್ ಗೋಯಲ್ ಇಂದು ಮಂಡಿಸಿದ ಬಜೆಟ್ ನಿಜಕ್ಕೂ ಸ್ವಾಗತಾರ್ಹ. ಕರಾವಳಿ ಭಾಗದ ಮುಖ್ಯ ಕಸುಬು ಮೀನುಗಾರಿಕೆಗೆ ವಿಶೇಷ ಒತ್ತು ನೀಡಿರುವುದು ಮೀನುಗಾರರಿಗೆ ಸಂತಸ ತಂದಿದೆ. ಗೃಹ ಸಾಲದಲ್ಲೂ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಮಾಡಿದ ಕೇಂದ್ರ ಸರಕಾರ, ಹೊಸ ಮನೆ ಖರೀದಿ ಮಾಡುವವರಿಗೂ ಅನುಕೂಲವಾಗುವಂತೆ ಜಿಎಸ್‌ಟಿ ಇಳಿಸುವಂತೆ ಜಿಎಸ್‌ಟಿ ಸಮಿತಿಗೆ ಮನವಿ ಮಾಡಿದೆ. ಈ ಬಾರಿಯ ಬಜೆಟ್ ಮಧ್ಯಮ ವರ್ಗದ ಜನರ ಜೀವನಕ್ಕೆ ತುಂಬಾ ಸಹಾಯಕವಾಗಲಿದೆ.
-ಕೆ.ರಘುಪತಿ ಭಟ್, ಶಾಸಕರು ಉಡುಪಿ.
ಸುಳ್ಳುಗಳ ಸರಮಾಲೆ
ಅಂಗನವಾಡಿ ನೌಕರರಿಗ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರಕಾರ ತಾನು ದೀಪಾವಳಿಯ ಉಡುಗೊರೆಯಾಗಿ 1500ರೂ. ಹಾಗೂ 750ರೂ ಹೆಚ್ಚಿಸಿದ್ದೇನೆಂದು ಹೇಳಿದ ಹಣವನ್ನು ಇನ್ನೂ ನೀದೇ ಈಗ ಬಜೆಟ್ಟಿನಲ್ಲಿ ಗೌರವಧನವನ್ನು ದುಪ್ಪಟ್ಟು ಹೆಚ್ಚಿಸಿರುವುದಾಗಿ ಮತ್ತೆ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಮಹಾದ್ರೋಹವೆಸಗಿದೆ. ಪಿಂಚಣಿಗಾಗಿ ಏನನ್ನೂ ಹಣ ಮೀಸಲಿಟ್ಟಿಲ್ಲ. ಪೂರಕ ಪೌಷ್ಠಿಕ ಆಹಾರದ ಸಲುವಾಗಿ ಅಗತ್ಯವಿರುವ ಬಜೆಟ್ ಅನುದಾನವನ್ನೇ ಘೋಷಿಸಿಲ್ಲ. ಒಟ್ಟಿನಲ್ಲಿ ನೌಕರರ ವಿರೋಧಿ ಬಜೆಟ್‌ನನು ರಾಜ್ಯ ಅಂಗನವಾಡಿ ನೌಕರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ವಿರೋಧಿಸುತ್ತದೆ.
-ಸುಶೀಲಾ ನಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡುಪಿ.
ನಿರಾಶಾದಾಯಕ ಬಜೆಟ್
ಕೃಷಿ ಉತ್ಪಾದನೆ ಹಾಗೂ ಸಣ್ಣ ಕೈಗಾರಿಕೆಗೆ ಯಾವುದೇ ಉತ್ತೇಜನ ನೀಡಿಲ್ಲ. ನಿರುದ್ಯೋಗ ಪರಿಹರಿಸುವಲ್ಲಿ ಯಾವುದೇ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಚುನಾವಣಾ ಸಂದರ್ಭದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದು ಚುನಾವಣಾ ಗಿಮಿಕ್ ಆಗಿದೆ. ಇದೊಂದು ಅಭಿವೃದ್ದಿ ಚಿಂತನೆಯಿಲ್ಲದ ಚುನಾವಣಾ ದೃಷ್ಟಿಕೋನದಿಂದ ಮಂಡಿಸಿದ ನಿರಾಶಾದಾಯಕ ಬಜೆಟ್.
-ಜನಾರ್ದನ ತೋನ್ಸೆ, ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್.
ಚುನಾವಣಾ ಗಿಮಿಕ್.. ನಿರಾಶೆಯ ಬಜೆಟ್
ರೈತರ ಸಾಲಮನ್ನಾ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಮಧ್ಯಮ ವರ್ಗ, ರೈತರು ಹಾಗೂ ಬಡವರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದೇ ಆದಲ್ಲಿ ನಾಲ್ಕುವರೆ ವರ್ಷದ ಹಿಂದೆಯೇ ಈ ಬಜೆಟ್‌ನ್ನು ಮಂಡಿಸಬೇಕಿತ್ತು. ಇದು ಬಜೆಟ್ ಅಲ್ಲ. ..2019ರ ಲೋಕಸಭಾ ಚುನಾವಣಾ ಪ್ರಣಾಳಿಕೆ. ಇದು ಕೇವಲ ಚುನಾವಣೆ ಗಿಮಿಕ್. ನಿರಾಶಾದಾಯಕ ಬಜೆಟ್.
-ಯೋಗೀಶ್ ವಿ. ಶೆಟ್ಟಿ, ಜಿಲ್ಲಾಧ್ಯಕ್ಷರು, ಜೆಡಿಎಸ್, ಉಡುಪಿ ಜಿಲ್ಲೆ.
ಐತಿಹಾಸಿಕ ಮತ್ತು ಅಭೂತ ಪೂರ್ವ
2019-2020ನೇ ಸಾಲಿನ ಬಜೆಟ್ ಐತಿಹಾಸಿಕ ಮೈಲಿಗಲ್ಲು ಮತ್ತು ಅಭೂತ ಪೂರ್ವ. ಇಡೀ ದೇಶದ ಜನರಿಗೆ ಸ್ಪಂದಿಸಿದ ಇದುವರೆಗಿನ ಏಕೈಕ ಬಜೆಟ್. ಮೀನುಗಾರರ ಬಹುಮುಖ್ಯ ಬೇಡಿಕೆಯಾದ ಪ್ರತ್ಯೇಕ ಖಾತೆ ಬೇಡಿಕೆಯನ್ನು ಮನ್ನಿಸಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ನೀಡಿರುವುದು ಅತ್ಯಂತ ಸೂಕ್ತ ಮತ್ತು ಸಂತಸದ ವಿಚಾರ.
-ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉಡುಪಿ.
ಅಭಿವೃದ್ಧಿಯ ಸ್ಪಷ್ಟತೆ ಇಲ್ಲದ ಬಜೆಟ್
ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲಾ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಜನರನ್ನು ಸುಲಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಈಗ ಚುನಾವಣೆ ನಿಮಿತ್ತ ಏಕಾಏಕಿ ವಿನಾಯಿತಿಗಳ ಮಹಾಪೂರವನ್ನೇ ಹರಿಸಿದೆ. ಮಧ್ಯಮ ವರ್ಗದ ಬಗ್ಗೆ ಬಿಜೆಪಿಗೆ ನಿಜವಾದ ಕಾಳಜಿ ಇದ್ದಲ್ಲಿ ಕಳೆದ ನಾಲ್ಕು ಬಜೆಟ್‌ಗಳಲ್ಲಿ ಜನರ ಬೇಡಿಕೆಯಾದ ಆದಾಯ ತೆರಿಗೆ ವಿನಾಯಿತಿಯನ್ನು ಏರಿಸದೇ ಈಗ ಏಕಾಏಕಿ 5 ಲಕ್ಷಕ್ಕೆ ಏರಿಸಿರುವುದು ಚುನಾವಣಾ ದೃಷ್ಟಿಯಲ್ಲಿ ಎಂಬುದು ಸ್ಪಷ್ಟ. ಉದ್ಯೋಗ ಸೃಷ್ಟಿಸುವಲ್ಲಿಯೂ ಬಜೆಟ್ ವಿಫಲ, ಕೃಷಿ ಅಭಿವೃದ್ಧಿ ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ದಿಗೆ ಯಾವುದೆ ಉತ್ತೇಜನ ನೀಡಿಲ್ಲ. ಒಟ್ಟಿನಲ್ಲಿ ಅಭಿವೃದ್ದಿ ಬಗ್ಗೆ ಸ್ವಷ್ಟ ಗುರಿಇಲ್ಲದ ಬಜೆಟ್ ಇದಾಗಿದೆ.
-ಭಾಸ್ಕರ ರಾವ್ ಕಿದಿಯೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ.
ಮೀನುಗಾರರಿಗೆ ಬಂಪರ್
ಮೀನುಗಾರರಿಗೆ ಬಂಪರ್ ಮೀನುಗಾರರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಮೀನುಗಾರಿಕ ಸಚಿವಾಲಯವನ್ನು ಸ್ಥಾಪಿಸಿ ಪಶುಸಂಗೋಪನೆ ಜೊತೆ ಮೀನುಗಾರಿಕೆಗೂ ಶೇ.2 ಬಡ್ಡಿ ಸಾಲ ಸೌಲಭ್ಯ, 60 ವರ್ಷ ಮೇಲ್ಪಟ್ಟ ಮೀನುಗಾರರಿಗೆ 3,000 ರೂ. ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿ ಮೀನುಗಾರಿಕೆಯ ಅಭಿವೃದ್ದಿ ಹಾಗೂ ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬುವ ಪ್ರಯತ್ನ.
ಮೀನುಗಾರರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಮೀನುಗಾರಿಕ ಸಚಿವಾಲಯವನ್ನು ಸ್ಥಾಪಿಸಿ ಪಶುಸಂಗೋಪನೆ ಜೊತೆ ಮೀನುಗಾರಿಕೆಗೂ ಶೇ.2 ಬಡ್ಡಿ ಸಾಲ ಸೌಲ್ಯ,60ವರ್ಷಮೇಲ್ಪಟ್ಟಮೀನುಗಾರರಿಗೆ3,000ರೂ.ಪಿಂಚಣಿಸೇರಿದಂತೆಎಲ್ಲಾಸೌಲ್ಯ ನೀಡಿ ಮೀನುಗಾರಿಕೆಯ ಅಭಿವೃದ್ದಿ ಹಾಗೂ ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬುವ ಪ್ರಯತ್ನ.
-ಯಶ್‌ಪಾಲ್ ಸುವರ್ಣ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ವಾರಾಟ ಫೆಡರೇಷನ್ ಅಧ್ಯಕ್ಷ, ಉಡುಪಿ.
ನಿವೃತ್ತ ವೇತನದಾರರ ಸ್ವಾಗತ
ದೇಶದ ನಿವೃತ್ತ ವೇತನದಾರರನ್ನು ಆದಾಯ ತೆರಿಗೆಗೆ ಒಳಪಡಿಸಬಾರದೆಂ ಬುದು ನಿವೃತ್ತ ವೇತನದಾರರ ಕೇಳಿಕೆಯಾದರೂ, ಈ ಬಾರಿ ತೆರಿಗೆ ರಿಯಾಯಿತಿ ಯನ್ನು ಹೆಚ್ಚಿಸಿರುವುದರಿಂದ ನಿವೃತ್ತ ವೇತನದಾರರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.
-ಶ್ರೀನಿವಾಸ ಶೆಟ್ಟಿ ತೋನ್ಸೆ, ಕಾರ್ಯದರ್ಶಿ ನಿೃತ್ತ ವೇತನದಾರರ ಸಂಘ ಉಡುಪಿ.
ಅದಾಯ ತೆರಿಗೆ ವಿನಾಯಿತಿ ಮಿತಿ ದುಪ್ಪಟ್ಟು, ಕಿಸಾನ್ ಸಮ್ಮಾನ್ ನಿಧಿ, ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ, ಸೈನಿಕ ಕಲ್ಯಾಣನಿಧಿಗೆ ಹೆಚ್ಚುವರಿ ಮೊತ್ತ ಸ್ವಾಗತಾರ್ಹ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಪರಿಣಾಮಕಾರಿ ಯಾಗಿ ಜಾರಿಯಾಗಬೇಕು. ಹೈನುಗಾರಿಕೆಯನ್ನೇ ನಂಬಿರುವ ರೈತರಿಗೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ‘ಕಾಮಧೇನು’ ಯೋಜನೆ ಒಳ್ಳೆಯದು.
- ವಾಸುದೇವ ಭಟ್ಟ ಪೆರಂಪಳ್ಳಿ, ಸಂಸ್ಕಾರ ಭಾರತಿ ಸಂಚಾಲಕ ಉಡುಪಿ