×
Ad

ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಸಮಘಟನೆಗಳ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮ ಕೊಗೊಳ್ಳಬೇಕು: ದಿನೇಶ್ ಗುಂಡೂರಾವ್‌

Update: 2019-02-03 18:39 IST

ಮಂಗಳೂರು, ಫೆ . 3: ಗಾಂಧಿಯನ್ನು ಕೊಂದವರಿಗೆ ಜೈಕಾರ ಹಾಕುತ್ತಾ ಅವರ ಪ್ರತಿಮೆಗೆ ಬಂದೂಕನ್ನು ಗುರಿ ಮಾಡಿ ಹತ್ಯೆ ಮಾಡುವ ಅಣಕು ಮಾಡುತ್ತಾ ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಮತೀಯ ಉಗ್ರವಾದಿ ಸಂಘಟನೆಯ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಜನವರಿ 30ರಂದು ಗಾಂಧಿ ಹತ್ಯೆಯ ದಿನವನ್ನು ದೇಶದಲ್ಲಿ ಹುತಾತ್ಮರ ದಿನವಾಗಿ ಹತ್ತ್ಮಾ ರಿಗೆ ಗೌರವ ಸಲ್ಲಿಸುತ್ತಿರುವಾಗ ಸಂದರ್ಭದಲ್ಲಿ ಇನ್ನೊಂದು ಕಡೆ ಹಿಂದೂ ಮಹಾ ಸಭಾದಂತಹ ಸಂಘಟನೆ ಗಾಂಧಿ ಹಂತಕರ ವಿರುದ್ಧ ಘೋಷಣೆ ಕೂಗುತ್ತಾ ,ಗಾಂಧಿ ಪ್ರತಿಮೆಗೆ ಬಂದೂಕಿನಿಂದ ಗುಂಡಿಕ್ಕುವ ಅಣಕು ಪ್ರದರ್ಶನ ಮಾಡುತ್ತಾ ಮತೀಯ ಉಗ್ರವಾದವನ್ನು ಪ್ರದರ್ಶಿಸಿದೆ .ಗಾಂಧಿಯ ಹತ್ಯೆಗೂ ಈ ರೀತಿಯ ಮತೀಯ ಉಗ್ರವಾದ ಕಾರಣವಾಗಿತ್ತು. ಇದರ ವಿರುದ್ಧ ಕಾಂಗ್ರೆಸ್ ಎಲ್ಲಾ ಕಡೆ ಆ ಸಂಘಟನೆಯ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಧರ್ಮ, ಮತದ ಹೆಸರಿನಲ್ಲಿ ಹಿಂಸಾಚಾರಗಳು, ಹತ್ಯೆಗಳು ಹೆಚ್ಚು ನಡೆದಿದೆ ಬಿಜೆಪಿ ಇಂತಹ ಶಕ್ತಿಗಳನ್ನು ಬೆಂಬ ಲಿಸುತ್ತಿರುವುದು ದುರಂತವಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಹಿಂಸೆಮತ್ತು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ಸಂಘಟನೆಗಳ ವಿರುದ್ಧ ಕೇಂದ್ರ ಸರಕಾರ ವೌನವಹಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.

ಸೀಟ್ ಹಂಚಿಕೆಯ ಬಗ್ಗೆ ಯಾವ ತೀರ್ಮಾನ ಆಗಿಲ್ಲ:- ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆಯ ಬಗ್ಗೆ ಯಾವೂದೇ ತೀರ್ಮಾನ ಆಗಿಲ್ಲ ಎಂದು ದಿನೇಶ್ ತಿಳಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರದಲ್ಲಿ ಯಾವೂದೇ ಗೊಂದಲ ಇಲ್ಲ. ಕುಮಾರಸ್ವಾಮಿ ಪ್ರಧಾನಿ ಮೋದಿಯ ರೀತಿ ಒಬ್ಬರೆ ನಿರ್ಧಾರ ತೆಗದುಕೊಳ್ಳುವವರಲ್ಲ. ಎಲ್ಲರ ಜೊತೆ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷಕ್ಕೆ ಮುಜುಗರ ವಾಗದಂತೆ ಮಾತನಾಡಿ ಎಂದು ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಗುಂಡೂರಾವ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಐವನ್ ಡಿ ಸೋಜ, ಶಾಸಕ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News