ಗಂಗೊಳ್ಳಿ: ಹಿಂದೂ ಮಹಾಸಭಾ ವಿರುದ್ಧ ಎಸ್‌ಡಿಪಿಐ ಧರಣಿ

Update: 2019-02-03 14:56 GMT

ಕುಂದಾಪುರ, ಫೆ.3: ಹಿಂದೂ ಮಹಾಸಭಾ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಗಂಗೊಳ್ಳಿ ಜಾಮಿಯಾ ಮೊಹಲ್ಲಾ ಕ್ರಾಸ್ ಬಳಿ ರವಿವಾರ ಧರಣಿ ನಡೆಸಲಾಯಿತು.

ಎಸ್‌ಡಿಪಿಐ ಮುಖಂಡ ಮೌಲಾನಾ ಮೊಹಮ್ಮದ್ ಮುಅಝಮ್ ಕಾಸ್ಮಿ ಮಾತನಾಡಿ, ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಚುನಾವಣೆ ಹತ್ತಿರ ಬಂದಾಗ ರಾಮ ಮಂದಿರ ನೆನಪು ಬರುತ್ತದೆ. ಬಿಜೆಪಿ ರಾಮಮಂದಿರದ ಹೆಸರಿನಲ್ಲಿ ಹಿಂದುಗಳಿಗೆ ಮೋಸ ಮಾಡುತ್ತಿದೆ. ರಾಷ್ಟ್ರಪಿತ ಗಾಂಧೀಜಿ ಪ್ರತಿಕೃತಿಗೆ ಗುಂಡು ಹೊಡೆದು ಅಮಾನವೀಯ ಕೃತ್ಯ ನಡೆಸಿದ ಹಿಂದೂ ಮಹಾಸಭಾದ ಮುಖಂಡ ರನ್ನು ಬಂಧಿಸಬೇಕು. ಹಿಂದೂ ಮಹಾಸಭಾ ಹುತಾತ್ಮ ದಿನನ್ನು ಶೌರ್ಯ ದಿನವನ್ನಾಗಿ ಆಚರಿಸಿರುವುದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.

ಇದೇ ಸಂದರ್ಭ ಗೋಡ್ಸೆ ಪ್ರತಿಕೃತಿಗೆ ಚಪ್ಪಲಿಯೇಟು ಹಾಕಿದ ಧರಣಿನಿರತರು ನಂತರ ಅದನ್ನು ನೇಣುಗಂಬಕ್ಕೆ ಏರಿಸಿದರು. ಧರಣಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಸಿದ್ದಿಕ್, ಮೌಲಾನಾ ಅಬ್ದುಲ್ ಗಫೂರ್, ಉಸಾಮ, ರಜಬ್, ಫಾಝಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News