‘ಕತ್ತಲೆ ಬೆತ್ತಲು’ ಕಥಾ ಸಂಕಲನ ಬಿಡುಗಡೆ
ಉಡುಪಿ, ಫೆ.3: ಉಡುಪಿ ಸುಹಾಸಂ ವತಿಯಿಂದ ಶ್ರೀರಾಜ್ ಎಸ್. ಆಚಾರ್ಯ ವಕ್ವಾಡಿ ಅವರ ‘ಕತ್ತಲೆ ಬೆತ್ತಲು’ ಕಥಾ ಸಂಕಲನ ಬಿಡುಗಡೆ ಸಮಾ ರಂಭವು ರವಿವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿ, ಲೇಖಕ, ಕಥೆಗಾರರಿಗೆ ಇಂದು ಸಾಮಾ ಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ. ಫೇಸ್‌ಬುಕ್, ಬ್ಲಾಗ್‌ಗಳಲ್ಲಿ ತಮ್ಮ ಕಥೆ, ಲೇಖನಗಳನ್ನು ಪ್ರಕಟಿಸುವುದರಿಂದ ಓದುಗರಿಂದ ತಕ್ಷಣದ ಪ್ರತಿ ಕ್ರಿಯೆ ಲಭಿಸುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಹಯವದನ ಮೂಡುಸಗ್ರಿ ಮಾತನಾಡಿದರು. ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಭಟ್ ಕೃತಿ ಪರಿಚಯ ಮಾಡಿದರು.
ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಕಾರ್ಯ ದರ್ಶಿ ಎಚ್.ಗೋಪಾಲ ಭಟ್ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಶ್ರೀನಿ ವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.