×
Ad

ಮೋದಿ ಹೊಗಳಿ ಪತ್ರ ಬರೆದು ಪಕ್ಷ ತೊರೆದ ಕಾಂಗ್ರೆಸ್ ಶಾಸಕಿ

Update: 2019-02-03 22:36 IST

ಅಹಮದಾಬಾದ್,ಫೆ.3: ಪಕ್ಷಪಾತ ಮತ್ತು ವಿಭಜನೆ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಗುಜರಾತ್ ಕಾಂಗ್ರೆಸ್ ಶಾಸಕಿ ಆಶಾ ಪಟೇಲ್ ಶನಿವಾರ ಪಕ್ಷವನ್ನು ತೊರೆದಿದ್ದಾರೆ.

ಗುಜರಾತ್‌ನ ಮೆಹಸಾನಾ ಜಿಲ್ಲೆಯ ಉಂಜದ ತನ್ನ ಶಾಸಕ ಸ್ಥಾನಕ್ಕೂ ಪಟೇಲ್ ರಾಜೀನಾಮೆ ನೀಡಿದ್ದಾರೆ. ಒಂದು ಕಡೆ, ಪ್ರಧಾನಿ ನರೇಂದ್ರ ಮೋದಿ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಕ್ಕೆ ಶೇ.10 ಕೋಟಾ ನೀಡಿದರೆ ಕಾಂಗ್ರೆಸ್ ವಿವಿಧ ಜಾತಿಗಳ ಮಧ್ಯೆ ಬಿರುಕು ಮೂಡಿಸಲು ಯತ್ನಿಸುತ್ತಿದೆ ಎಂದು ಪಟೇಲ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬರೆದಿರುವ ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಆಶಾ ಪಟೇಲ್ ತನ್ನ ರಾಜೀನಾಮೆಯನ್ನು ಶನಿವಾರ ಬೆಳಿಗ್ಗೆ ಗಾಂಧಿನಗರದಲ್ಲಿ ಸ್ಪೀಕರ್ ರಾಜೇಂದ್ರ ತ್ರಿವೇದಿಯವರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News