ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕರಿ ಚಿರತೆ ಪ್ರತ್ಯಕ್ಷ
Update: 2019-02-03 22:53 IST
ಉಡುಪಿ, ಫೆ. 3: ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹತ್ತಾರು ಹುಲಿಗಳಿದ್ದು, ವಿವಿಧ ವನ್ಯಜೀವಿಗಳೂ ಇವೆ ಹಾಗು ಜನರ ಕಣ್ಣಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳದೇ ಸಂಚರಿಸುವ ಅಪರೂಪದ ಕರಿ ಚಿರತೆಗಳಿವೆ.
ಸಾಮಾನ್ಯವಾಗಿ ದಟ್ಟಾರಣ್ಯದ ನಡುವೆಯೇ ಇರುವ ಕರಿ ಚಿರತೆಗಳು ಜನಸಂಚಾರದ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಕಡಿಮೆ. ಅಂತಹ ಒಂದು ಕರಿಚಿರತೆಯೊಂದು ಆಹಾರ ಹುಡುಕುತ್ತ ರಸ್ತೆಯಂಚಿಗೆ ಬಂದಿದೆ.
ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕಂಡು ಬಂದಿದೆ. ಈ ಅಪರೂಪದ ಕರಿಚಿರತೆ ರಸ್ತೆಯಂಚಿನ ದಿಬ್ಬದ ಮೇಲೆ ವಿಶ್ರಾಂತಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.