ದೈವದ ಮನೆಯ ಸೊತ್ತು ಕಳವು

Update: 2019-02-03 17:41 GMT

ಗಂಗೊಳ್ಳಿ, ಫೆ.3: ನೂಜಾಡಿ ಗ್ರಾಮದ ಮನೆಯೊಂದರ ದೈವದ ಮನೆಗೆ ಫೆ.1ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಸೂಲಿಯಣ್ಣ ಎಂಬವರ ಪತ್ನಿಯ ಮನೆಯ ಮೇಲುಸ್ತಾನದ ಮುಡುರ ಹೈಗುಳಿ ಸಹಪರಿವಾರದ ದೈವದ ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ದೈವಸ್ಥಾನದ ಹುಂಡಿಯ ಬೀಗ ಒಡೆದು ಅದರಲ್ಲಿದ್ದ 15,000 ರೂ., ಮೂರು ಬೆಳ್ಳಿಯ ಹೂಜಿಗಳು, ಒಂದು ಬೆಳ್ಳಿಯ ತಂಬಿಗೆ ಸೇರಿದಂತೆ ಒಟ್ಟು 80,000 ರೂ. ಮೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News