ಮೆಕ್ಸಿಕೊ ಗಡಿಗೆ 3,750 ಹೆಚ್ಚುವರಿ ಸೈನಿಕರನ್ನು ಕಳುಹಿಸಿದ ಪೆಂಟಗನ್

Update: 2019-02-04 13:57 GMT

ವಾಶಿಂಗ್ಟನ್, ಫೆ. 4: ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್, ಗಡಿ ಏಜಂಟರಿಗೆ ಸಹಾಯ ಮಾಡುವುದಕ್ಕಾಗಿ ಮೆಕ್ಸಿಕೊ ಗಡಿಗೆ 3,750 ಹೆಚ್ಚುವರಿ ಸೈನಿಕರನ್ನು ಕಳುಹಿಸುತ್ತಿದೆ ಎಂದು ಪೆಂಟಗನ್ ರವಿವಾರ ತಿಳಿಸಿದೆ.

ಇದರೊಂದಿಗೆ, ಗಡಿಯಲ್ಲಿ ಸುಂಕ ಮತ್ತು ಗಡಿ ರಕ್ಷಣಾ ಏಜಂಟರಿಗೆ ಬೆಂಬಲ ನೀಡುತ್ತಿರುವ ಸೈನಿಕರ ಸಂಖ್ಯೆ 4,350ಕ್ಕೆ ಏರಿದೆ.

ಮೆಕ್ಸಿಕೊ ಗಡಿಯಲ್ಲಿನ ಪರಿಸ್ಥಿತಿ ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

ಅವರು ಮಂಗಳವಾರ ಸಂಸತ್ತಿನಲ್ಲಿ ಮಾಡುವ ವಾರ್ಷಿಕ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣದಲ್ಲಿ ವಲಸೆ ಹಾಗೂ ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವ ತನ್ನ ಪ್ರಸ್ತಾಪದ ಬಗ್ಗೆ ಮಾತನಾಡುತ್ತಾರೆಂದು ನಿರೀಕ್ಷಿಸಲಾಗಿದೆ.

ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟಲು ಹಣ ಬಿಡುಗಡೆ ಮಾಡುವ ವಿಷಯದಲ್ಲಿ ಟ್ರಂಪ್ ಮತ್ತು ಸಂಸತ್ತಿನ ನಡುವೆ ಸಂಘರ್ಷ ಏರ್ಪಟ್ಟು, ಫೆಡರಲ್ ಸರಕಾರವು 35 ದಿನಗಳ ಕಾಲ ಸ್ಥಗಿತಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ಕೊನೆಗೂ, ಸರಕಾರ ಬಂದ್ ಜನವರಿ 25ರಂದು ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News