ನಿವೃತ್ತ ಅಂಕಿಅಂಶ ಅಧಿಕಾರಿಗಳ ಸಮಾವೇಶ
Update: 2019-02-04 19:37 IST
ಮಂಗಳೂರು, ಫೆ.4: ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ನಿವೃತ್ತ ಅಧಿಕಾರಿಗಳ ಸಮಾವೇಶವು ಇತ್ತೀಚೆಗೆ ನಗರದಲ್ಲಿ ಜರುಗಿತು.
ಸಂಸ್ಥೆಯ ಉಪ ಮಹಾನಿರ್ದೇಶಕ ಅಯೂಬ್ ಅಹ್ಮದ್ ಬಿ. ಸಮಾವೇಶ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತು ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಹಿರಿಯ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಕರ್ಣಾಟಕ ಬ್ಯಾಂಕ್‌ನ ಗಿರೀಶ್, ಕಾರ್ಯಕ್ರಮದ ಸಂಘಟಕ ಕೆ. ತಾರಾನಾಥ ಹೊಳ್ಳ, ಎಂ.ಜಿ. ಕುಂದರ್, ಪಿ.ಪಿ. ಕ್ಷೀರಸಾಗರ ಹಾಗೂ ಬೆಂಗಳೂರಿನ ಸುಬ್ಬರಾಮ ಉಪಸ್ಥಿತರಿದ್ದರು.