×
Ad

ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಬೆಂಕಿ: 3 ವಿಜ್ಞಾನಿಗಳ ಸಾವು

Update: 2019-02-04 19:44 IST

ಟೆಹರಾನ್ (ಇರಾನ್), ಫೆ. 4: ಇರಾನ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಮೂವರು ವಿಜ್ಞಾನಿಗಳು ಮೃತಪಟ್ಟಿದ್ದಾರೆ ಎಂದು ‘ಇಸ್ನ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಒಂದು ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಮೂವರು ಸಂಶೋಧಕರು ಮೃತಪಟ್ಟಿದ್ದಾರೆ ಎಂದು ದೂರಸಂಪರ್ಕ ಸಚಿವ ಮುಹಮ್ಮದ್ ಜಾವೇದ್ ಅಝರಿ ಜಹ್ರೂಮಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರವಿವಾರ ತಿಳಿಸಿದೆ.

ಆದರೆ, ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಬಾಹ್ಯಾಕಾಶ ಕಕ್ಷೆಗೆ ಉಪಗ್ರಹವೊಂದನ್ನು ಹಾರಿಬಿಡಲು ಇರಾನ್ ಸಿದ್ಧತೆಗಳನ್ನು ನಡೆಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಜನವರಿಯಲ್ಲಿ ಇರಾನ್ ಉಪಗ್ರಹವೊಂದನ್ನು ಉಡಾಯಿಸಿತ್ತು. ಆದರೆ, ಹಾರಾಟದ ಮೂರನೇ ಘಟ್ಟದಲ್ಲಿ ‘ಅಗತ್ಯ ವೇಗವನ್ನು ಪಡೆಯಲು’ ಅದು ವಿಫಲವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News