×
Ad

ಬೈಂದೂರು ತಾಲೂಕಿನಲ್ಲಿ 259 ಮಂದಿಗೆ ಹಕ್ಕುಪತ್ರ ವಿತರಣೆ

Update: 2019-02-04 20:19 IST

ಕುಂದಾಪುರ, ಫೆ.4: ಬೈಂದೂರು ವಿಧಾನಸಬಾ ಕ್ಷೇತ್ರದ ವಂಡ್ಸೆ ಹೋಬಳಿ ಹಾಗೂ ಬೈಂದೂರು ತಾಲೂಕಿಗೆ ಸಂಬಂಧಿಸಿದಂತೆ 94 ಸಿ ಯೋಜನೆಯಲ್ಲಿ ಒಟ್ಟು 259 ಮಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಸೋಮವಾರ ತ್ರಾಸಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹಕ್ಕುಪತ್ರಗಳನ್ನು ವಿತರಿಸಿದರು.

ಹಕ್ಕುಪತ್ರ ವಿತರಿಸಿ ಮಾತನಾಡಿದ ಸಚಿವೆ, ಸರಕಾರ ಜನರ ಬಳಿಗೆ ಬಂದು ಸವಲತ್ತು ವಿತರಿಸುತ್ತಿದೆ. 94ಸಿ ಯೋಜನೆಯಲ್ಲಿ ಹಕ್ಕುಪತ್ರ ಪಡೆದವರು ಅನೇಕ ವರ್ಷಗಳ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. 94 ಸಿ ಮಾತ್ರವಲ್ಲದೇ ಸರಕಾರದ ವಿವಿಧ ವಸತಿ ಯೋಜನೆಗಳ ಪ್ರಯೋಜನವನ್ನು ಪ್ರತಿ ನಾಗರಿಕರು ಪಡೆಯುವಂತೆ ತಿಳಿಸಿದ ಸಚಿವೆ, ಸರಕಾರ ಜಾರಿಗೆ ತಂದಿರುವ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ 29 ವಿಧವಾ ವೇತನ, 49 ಸಂಧ್ಯಾ ಸುರಕ್ಷಾ, 2 ವೃದ್ದಾಪ್ಯ ವೇತನ ಸೌಲಭ್ಯಗಳನ್ನು ಸಹ ಸಚಿವೆ ಜಯಮಾಲ ವಿತರಿಸಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಂಟ್ವಾಡೆ, ಜ್ಯೋತಿ ಹರೀಶ್, ಗೌರಿ ದೇವಾಡಿಗ, ಶೋಭಾ ಪುತ್ರನ್, ರೋಹಿತ್ ಶೆಟ್ಟಿ, ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳ ಜನಪ್ರತಿನಿಧಿಗಳು ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುವಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News