×
Ad

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: 5 ಸಾಕ್ಷಿಗಳ ವಿಚಾರಣೆ

Update: 2019-02-04 22:07 IST

ಉಡುಪಿ, ಫೆ. 4: ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಯು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದಿನಿಂದ ಮತ್ತೆ ಮುಂದುವರೆದಿದ್ದು, ಮೊದಲ ದಿನ ಒಟ್ಟು ಐದು ಸಾಕ್ಷಿಗಳ ಮುಖ್ಯ ಹಾಗೂ ಅಡ್ಡ ವಿಚಾರಣೆ ನಡೆಸಲಾಯಿತು.

ಆರ್‌ಟಿಓ ಕಚೇರಿಯ ಮೋಟಾರ್ ವಾಹನ ನಿರೀಕ್ಷಕ ಮಾರುತಿ ನಾಯಕ್, ಮಂಗಳೂರು ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ಪ್ರೊ.ಡಾ.ಉದಯ ಕುಮಾರ್, ಮಂಗಳೂರು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ಗೀತಾಲಕ್ಷ್ಮೀ ಪಿ., ಕುಂದಾಪುರ ಉಪತಹಶೀಲ್ದಾರ್ ಎಸ್.ವಿ.ವಿನಯ್, ಮೃತ ಭಾಸ್ಕರ್ ಶೆಟ್ಟಿಯ ಸಹೋದರಿ ಜಯಂತಿ ಅವರ ಸಾಕ್ಷ ವಿಚಾರಣೆ ನಡೆಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಸಮ್ಮುಖದಲ್ಲಿ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತ ರಾಮ್ ಶೆಟ್ಟಿ ಹಾಗೂ ಅಡ್ಡ ವಿಚಾರಣೆಯನ್ನು ಆರೋಪಿಗಳ ಪರ ವಕೀಲರು ಗಳಾದ ತೋನ್ಸೆ ನಾರಾಯಣ ಪೂಜಾರಿ, ಅರುಣ್ ಬಂಗೇರ, ವಿಕ್ರಂ ಹೆಗ್ಡೆ ನಡೆಸಿದರು.

ವಿಚಾರಣೆ ಸಂದರ್ಭ ಬೆಂಗಳೂರಿನ ಕಾರಾಗೃಹದಲ್ಲಿರುವ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತು ಜಾಮೀನ ನಲ್ಲಿ ಬಿಡುಗಡೆಗೊಂಡಿರುವ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಹಾಗೂ ಸಾಕ್ಷನಾಶ ಆರೋಪಿ ರಾಘವೇಂದ್ರ ನ್ಯಾಯಾಲಯದಲ್ಲಿ ಹಾಜರಿದ್ದರು. ಇನ್ನೋರ್ವ ಆರೋಪಿ ಶ್ರೀನಿವಾಸ ಭಟ್ ಗೈರು ಹಾಜರಾಗಿದ್ದರು. ನಾಳೆ ಕೂಡ ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News