ಇವಿಎಂ ಫಲಿತಾಂಶದ ಶೇ.50ರಷ್ಟು ವಿವಿಪ್ಯಾಟ್ ಜೊತೆ ಹೋಲಿಕೆ ಮಾಡಿ: ವಿಪಕ್ಷಗಳ ಆಗ್ರಹ

Update: 2019-02-04 17:35 GMT

ಹೊಸದಿಲ್ಲಿ,ಫೆ.4: ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆಯ ಆರೋಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಚುನಾವಣಾ ಆಯೋಗವನ್ನು ಆಗ್ರಹಿಸಿವೆ. ಈ ಕುರಿತು ಸೋಮವಾರ ಚುನಾವಣಾಧಿಕಾರಿಗಳನ್ನು ಭೇಟಿಯಾದ ವಿಪಕ್ಷಗಳ ನಾಯಕರು ಚುನಾವಣಾ ಫಲಿತಾಂಶದ ಘೋಷಣೆಗೂ ಮೊದಲು ಇವಿಎಂ ಫಲಿತಾಂಶದ ಶೇ.50ರಷ್ಟನ್ನು ವಿವಿಪ್ಯಾಟ್ ಜೊತೆ ಹೋಲಿಕೆ ಮಾಡುವಂತೆ ಆಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವಿಎಂಗಳ ಸಾಮರ್ಥ್ಯದ ಬಗ್ಗೆ ದೇಶದ ಜನರು ಸಂಶಯ ವ್ಯಕ್ತಪಡಿಸುತ್ತಿದ್ದು ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ಅಗತ್ಯವಿದೆ ಎಂದು ಈ ವೇಳೆ ವಿಪಕ್ಷ ನಾಯಕರು ಅಭಿಪ್ರಾಯಿಸಿದ್ದಾರೆ. ಇದಕ್ಕೂ ಮೊದಲು ವಿಪಕ್ಷಗಳು ಹಳೆಯ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಆದರೆ ಹಳೆಯ ವ್ಯವಸ್ಥೆಗೆ ಮರಳುವ ಸಾಧ್ಯತೆಗಳು ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ನಂತರ ತಮ್ಮ ಕಾರ್ಯತಂತ್ರವನ್ನು ಬದಲಿಸಿದ ವಿಪಕ್ಷಗಳು ಇವಿಎಂ ಫಲಿತಾಂಶದ ಶೇ.50ರಷ್ಟನ್ನು ವಿವಿಪ್ಯಾಟ್ (ಮತದಾರರು ತಮ್ಮ ಮತ ಯಾರಿಗೆ ಹೋಗಿದೆ ಎಂದು ಪರಿಶೀಲಿಸಬಹುದಾದ ಪತ್ರ) ಜೊತೆ ಹೋಲಿಕೆ ಮಾಡಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News