ಫೆ.10ರಂದು ಕಾರ್ಕಳ ತಾಲೂಕು ಬಿಲ್ಲವ ಸಮ್ಮೇಳನ

Update: 2019-02-04 17:50 GMT

ಕಾರ್ಕಳ, ಫೆ. 4: ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಫೆ 10ರಂದು ತಾಲೂಕು ಬಿಲ್ಲವ ಸಮ್ಮೇಳನ ನಡೆಯಲಿದೆ ಎಂದು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು ತಿಳಿಸಿದರು.

ಅವರು ಸೋಮವಾರ ಪೆರ್ವಾಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಕಾರ್ಯಕ್ರಮದ ಕುರಿತು ವಿವರ ನೀಡಿದರು. ಅಂದು ಬೆಳಗ್ಗಿನ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಲ್ಯೊಟ್ಟುವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದು, ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು ಅಧ್ಯಕ್ಷತೆ ವಹಿಸಲಿದ್ದಾರೆ. 

ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಣಿಜ್ಯ ಸಂಕೀರ್ಣವನ್ನು, ಶಾಸಕ ವಿ. ಸುನಿಲ್ ಕುಮಾರ್ ನೂತನ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ, ಸಾಗರ್ ಗ್ರೂಪ್ ಅಫ್ ಹೊಟೇಲ್ಸ್ ನ ಆಡಳಿತ ನಿರ್ದೇಶಕ ಜಯರಾಮ್ ಬನಾನ್ ಭೋಜನ ಶಾಲೆಯನ್ನು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ರಶ್ಮಿ ಚಾರಿಟೇಬಲ್ ಟ್ರಸ್ಟ್ ಅನ್ನು ಲೋಕಾರ್ಪಣೆ ಮಾಡಲಿರುವರು. ಮೂಡಬಿದಿರೆ ಶಾಸಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಿಲ್ಲವರ ಅಸೊಶಿಯೇಷನ್ ಅಧ್ಯಕ್ಷ ವೇದ ಕುಮಾರ್, ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ ಕೋಟ್ಯಾನ್, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ ಎಸ್. ಕೋಟ್ಯಾನ್, ರಶ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸಾವಿತ್ರಿ ಡಿ.ಆರ್. ರಾಜು, ಪುರಸಭಾ ಉಪಾಧ್ಯಕ್ಷೆ ಶ್ರೀಧರ ಎಸ್. ಪೂಜಾರಿ, ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು ಮುಖ್ಯ ಅತಿಥಿಗಳಾಗಿ  ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. 

ಸಮಾರೋಪ ಸಮಾರಂಭ

ಅಂದು ಮಧ್ಯಾಹ್ನ 3 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಸದಾಶಿವ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್, ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಸುವರ್ಣ, ಪ್ರಭಾಕರ ಬಂಗೇರ, ಗೋಪಾಲ ಕೆ., ಪ್ರದೀಪ್ ಕೋಟ್ಯಾನ್ ಭಾಗವಹಿಸಲಿರುವರು.

ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆ ಗಂಟೆ 6ರಿಂದ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರಿಂದ ಶ್ರೀ ಸತ್ಯ ಹರೀಶ್ಚಂದ್ರ ಹಾಗೂ ಗಧಾಯುದ್ಧ  ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 

ವಿದ್ಯಾರ್ಥಿ ವೇತನ

ಪ್ರತಿವರ್ಷದಂತೆ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಈ ವರ್ಷ ಸುಮಾರು 6 ಲಕ್ಷ ರೂಕ್ಕಿಂತ ಹೆಚ್ಚಿನ ಮೊತ್ತವನ್ನು 330 ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ವಿತರಿಸಲಾಗುವುದು. 

ಸಮ್ಮಾನ

ತಾಲೂಕಿನಲ್ಲಿ ಸುಮಾರು 77 ಗರಡಿಗಳಿದ್ದು, ಅದರಲ್ಲಿ  ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಹಿರಿಯರನ್ನು ಗುರುತಿಸಿ ಗೌರವ ಧನ ನೀಡಲಾಗುವುದು ಎಂದು ಡಿ.ಆರ್. ರಾಜು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ  ಬಿಲ್ಲವ ಸಮಾಜದ ಪ್ರಮುಖರಾದ ಎಸ್. ಕೆ. ಸಾಲಿಯಾನ್, ಚಂದ್ರಹಾಸ ಸುವರ್ಣ, ಭಾಸ್ಕರ ಎಸ್. ಕೋಟ್ಯಾನ್, ನವೀನ್ ಸುವರ್ಣ, ಪ್ರಭಾಕರ್ ಬಂಗೇರ, ಸುಬೀತ್ ಕುಮಾರ್ ಎನ್. ಯುವ ಘಟಕದ ಅಧ್ಯಕ್ಷ ಸಂದೇಶ್ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ರಶ್ಮಿ ಟಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸಾವಿತ್ರಿ ಡಿ.ಆರ್. ರಾಜು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News