ಫೆ. 7ರಿಂದ ಕನ್ಯಾನ ಹಝ್ರತ್ ಉರೂಸ್, ನವೀಕೃತ ಮಖಾಂ ಕಟ್ಟಡ ಉದ್ಘಾಟನೆ
ಬಂಟ್ವಾಳ, ಫೆ. 5: ಕನ್ಯಾನ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಉದಯಾಸ್ತಮಾನ ಉರೂಸ್ ಹಾಗೂ ನವೀಕೃತ ಮಖಾಂ ಕಟ್ಟಡ ಉದ್ಘಾಟನೆ ಸಮಾರಂಭ ಫೆ. 7ರಿಂದ 17ರವರೆಗೆ ನಡೆಯಲಿದೆ ಎಂದು ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಬಾಳ್ತೋಡಿ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ.
ಅವರು ಮಂಗಳವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 7ರಂದು ಸಂಜೆ ಕನ್ಯಾನ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ನವೀಕೃತ ಕಟ್ಟಡ ಉದ್ಘಾಟಿಸುವರು. ಅಧ್ಯಕ್ಷ ಇಸ್ಮಾಯಿಲ್ ಹಾಜಿ ಧ್ವಜರೋಹಣ ಮಾಡಲಿದ್ದಾರೆ. ಮುದರ್ರಿಸ್ ಕೆ.ಎಂ ಇಬ್ರಾಹಿಂ ಫೈಝಿ ಭಾಗವಹಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಉದ್ಘಾಟಿಸಲಿದ್ದು, ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಭಾಷಣ ಮಾಡಲಿದ್ದಾರೆ. ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ಬಿ ರಮಾನಾಥ ರೈ, ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಮೊದಲಾದವರು ಭಾಗವಹಿಸುವರು ಎಂದರು.
ಉರೂಸ್ ಸಮಾರಂಭವನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸುವರು. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ. 8ರಂದು ಮುಹಮ್ಮದಾಲಿ ಸಖಾಫಿ ಮುಳ್ಳೂರುಕರ, ಫೆ. 9ರಂದು ಲುಕ್‍ಮಾನುಲ್ ಹಕೀಂ ಸಖಾಫಿ ಪುಲ್ಲಾರ, ಫೆ. 10ರಂದು ಸಫ್ವಾನ್ ಸಖಾಫಿ ಪತ್ತಪ್ಪಿರಿಯಂ, ಫೆ. 11ರಂದು ಅಬೂಬಕರ್ ಸಿದ್ದೀಖ್ ಮಹ್ಮೂದಿ ವಿಳಯಂ ಮಲಪ್ಪುರಂ, ಫೆ. 12ರಂದು ಹಂಝ ಮಿಸ್ಬಾಹಿ ಓಟಪಡವು, ಫೆ. 13ರಂದು ಝುಬೈರ್ ಸಖಾಫಿ ಅಲ್ ಅಝ್‍ಹರಿ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.
ಫೆ. 14ರಂದು ಕೆ.ಎಂ ಇಬ್ರಾಹೀಂ ಫೈಝಿ ನೇತೃತ್ವ ನೀಡಲಿದ್ದು, ಅಸೈಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ದುವಾಃ ಆಶೀರ್ವಚನ ನೀಡಲಿದ್ದಾರೆ. ಫೆ.15ರಂದು ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ. 17ರಂದು ಬೆಳಿಗ್ಗೆ ಮೌಲಿದ್ ಪಾರಾಯಣಕ್ಕೆ ಅಸ್ಸಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಬಳಿಕ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ, ಅಶ್ರಫ್ ಸಖಾಫಿ ಕನ್ಯಾನ, ಅಬೂಬಕರ್ ಸಿದ್ದೀಕ್ ಪೊಯ್ಯಗದ್ದೆ, ಇಸ್ಮಾಯಿಲ್ ಪೊಯ್ಯಗದ್ದೆ, ಹಮೀದ್ ದೇಲಂತಬೆಟ್ಟು ಉಪಸ್ಥಿತರಿದ್ದರು.