‘ಲಿಪಿ ಶಾಸ್ತ್ರ ಮಂಥನ’ ಅಧ್ಯಯನ ಪ್ರವಾಸ
Update: 2019-02-05 20:56 IST
ಉಡುಪಿ, ಫೆ.5: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ಸಂಹಿತಾ ಸಿದ್ಧಾಂತ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಪ್ರವಾಸ ಲಿಪಿ ಶಾಸ್ತ್ರ ಮಂಥನವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಹಸ್ತಪ್ರತಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಹದಿಮೂರು ಜನರ ತಂಡ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಹಾಗೂ ಸಂಪಾದನೆಗಳ ವಿವಿಧ ಆಯಾಮಗಳನ್ನು ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಸ್.ಆರ್.ವಿಘ್ನರಾಜ್ ಹಾಗೂ ಅವರ ಸಹೋದ್ಯೋಗಿಗಳ ಮಾರ್ಗದರ್ಶನದೊಂದಿಗೆ ಅಧ್ಯಯನ ನಡೆಸಿತು.
ಈ ಸಂದರ್ಭದಲ್ಲಿ ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಪಿ.ಎಚ್., ಪ್ರಾಧ್ಯಾಪಕಿ ಡಾ.ವಿದ್ಯಾಲಕ್ಷ್ಮೀ ಕೆ., ಸಹಾಯಕ ಪ್ರಾಧ್ಯಾಪಕರಾದ ಡಾ.ಅರ್ಹಂತ್ ಕುಮಾರ್, ಡಾ.ಲಿಖಿತಾ ಡಿ.ಎನ್., ಡಾ. ಅರ್ಚನಾ ಶುಕ್ಲ ಉಪಸ್ಥಿತರಿದ್ದರು.