×
Ad

ಸಚಿವ ರಹೀಮ್ ಖಾನ್ ರಿಗೆ ಕನಚ್ಚೂರು ಹೆಲ್ತ್‌ಕೇರ್‌ ವತಿಯಿಂದ ಸನ್ಮಾನ

Update: 2019-02-05 21:39 IST

ಮಂಗಳೂರು, ಫೆ. 5: ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಮ್ ಖಾನ್ ಅವರು ಕನಚ್ಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿದ್ದು, ನಂತರ ಸಚಿವರು ದಕ್ಷಿಣ ಕನ್ನಡದಲ್ಲಿ ನೂತನವಾಗಿ ಆರಂಭಗೊಂಡ ಆರೋಗ್ಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.

ಕನಚ್ಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಯು.ಕೆ ಮೋನು ರಹೀಮ್ ಖಾನ್ ಮತ್ತು ಪ್ರೊ.ಯು.ಟಿ ಇಫ್ತಿಕರ್ ಅಲಿ-ಸಿಂಡಿಕೇಟ್ ಸದಸ್ಯ, ಆರ್‌ಜಿಯುಎಚ್‌ಎಸ್, ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.

ಕನಚ್ಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕನಚ್ಚೂರು ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್ ಗಣ್ಯರನ್ನು ವೇದಿಕೆಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾಜಿ ಯು.ಕೆ ಮೋನು, ಸಚಿವ ರಹೀಮ್ ಖಾನ್ ನೇರ ನಡೆನುಡಿಯ ಮತ್ತು ಪ್ರಗತಿಪರ ಚಿಂತನೆಯ ನಾಯಕರಾಗಿದ್ದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ನಂತರ ಮಾತನಾಡಿದ ಸಚಿವರು, ದೇಶದ ಯುವಕರೇ ಮುಂದಿನ ನಾಯಕರು ಮತ್ತು ಅವರನ್ನು ಸರಿಯಾದ ರೀತಿಯಲ್ಲಿ ಸಿದ್ಧಗೊಳಿಸಬೇಕಿದೆ ಎಂದು ತಿಳಿಸಿದರು.

ತನ್ನ ಭಾಷಣದಲ್ಲಿ ಸಚಿವರನ್ನು ಶ್ಲಾಘಿಸಿದ ಪ್ರೊ.ಯು.ಟಿ ಇಫ್ತಿಕರ್ ಅಲಿ, ರಹೀಮ್ ಖಾನ್ ಅವರಿಗೆ ಕರ್ನಾಟಕದ ಬಗ್ಗೆ ಇರುವ ದೃಷ್ಟಿಕೋನ ಉತ್ತಮವಾಗಿದೆ ಎಂದು ವಿವರಿಸಿದರು. ಜೊತೆಗೆ ಆರ್‌ಜಿಯುಎಚ್‌ಎಸ್ ಅಡಿಯಲ್ಲಿ ಎಂಬಿಬಿಎಸ್, ಬಿಪಿಟಿ, ಬಿಎಸ್ಸಿ ನರ್ಸಿಂಗ್, ಬಿಎಸ್ಸಿ ಒಪ್ಟೊಮೆಟ್ರಿ ಮತ್ತು ಬಿಎಸ್ಸಿ ಎಂಎಲ್‌ಟಿ ಹೀಗೆ ಐದು ಕೋರ್ಸ್‌ಗಳನ್ನು ಏಕಕಾಲದಲ್ಲಿ ಆರಂಭಿಸಿದ ಏಕೈಕ ಸಂಸ್ಥೆ ಕನಚ್ಚೂರು ಕಾಲೇಜು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಕಾಂಗ್ರೆಸ್‌ನ ಹಲವು ನಾಯಕರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಉಪಸ್ಥಿತರಿದ್ದರು. ಡಾ. ರೋಹನ್ ಮೋನಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News