ದಾಲ್ ಸರೋವರದ ಮಧ್ಯೆ ನಿಂತು ಪ್ರಧಾನಿ ಮೋದಿ ಕೈಬೀಸಿದ್ದು ಯಾರಿಗೆ?

Update: 2019-02-05 16:13 GMT

ಜಮ್ಮು, ಫೆ.5: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಭಾರೀ ಭದ್ರತೆಯೊಂದಿಗೆ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಮೊಬೈಲ್ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಜಮ್ಮು, ಶ್ರೀನಗರ ಮತ್ತು ಲೇಹ್ ಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸಲುವಾಗಿ ಪ್ರಧಾನಿ ಭೇಟಿ ನೀಡಿದ್ದು, ಇದೇ ಸಂದರ್ಭ ಪ್ರಸಿದ್ಧ ದಾಲ್ ಸರೋವರಕ್ಕೂ ತೆರಳಿದ್ದರು.

ಪ್ರಧಾನಿಯವರು ದಾಲ್ ಸರೋವರಕ್ಕೆ ಭೇಟಿ ನೀಡಿದ ವಿಡಿಯೋವನ್ನು ಬಿಜೆಪಿಯ ಅಫಿಶಿಯಲ್ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮೋದಿ ಕೈಬೀಸುವುದು ಕಾಣಿಸುತ್ತದೆ. ಆದರೆ ಅಲ್ಲಿ ಜನರೇ ಇಲ್ಲ.

ಸಣ್ಣ ವಿಡಿಯೋದಲ್ಲಿ ಮೋದಿ ಕೈಬೀಸುವುದು ಕಾಣಿಸುತ್ತದೆ ಹೊರತು ಜನರು ಯಾರೂ ಕಾಣಿಸುವುದಿಲ್ಲ. ಈ ವಿಡಿಯೋ ವೀಕ್ಷಿಸಿ ಆಶ್ಚರ್ಯ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರು ಕಾಶ್ಮೀರಿಗರು. ಈ ಜಾಗದಲ್ಲಿ ಭಾರೀ ಭದ್ರತೆ ಇರುವುದರಿಂದ ಜನರು ಯಾರೂ ಇರಲು ಸಾಧ್ಯವಿಲ್ಲ ಎಂದು ಕಾಶ್ಮೀರಿಗರು ಟ್ವೀಟ್ ಮಾಡಿದ್ದಾರೆ.

“ತಮಾಷೆಯ ವಿಷಯವೆಂದರೆ ಜನರು ಇದ್ದಾರೆ ಎನ್ನುವುದನ್ನು ತೋರಿಸುವ ಹಾಗೆ ಅವರು ಕೈ ಬೀಸುತ್ತಿದ್ದಾರೆ. ದಾಲ್ ಸರೋವರ ವಿಸ್ತಾರವಾಗಿದ್ದು, ದಡದಲ್ಲಿ ಯಾರಿದ್ದಾರೆಂದು ನೋಡಲು ಸಾಧ್ಯವಿಲ್ಲ. ಎರಡನೆಯದಾಗಿ ಜನರು ಅಲ್ಲಿ ಹೋಗಲು ಅವಕಾಶವಿಲ್ಲ. ರಸ್ತೆಗಳನ್ನು ಬಂದ್ ಮಾಡಲಾಗಿದೆ. ಮೂರನೆಯದಾಗಿ ಅಲ್ಲಿ ಭದ್ರತಾ ಸಿಬ್ಬಂದಿ ಬಿಟ್ಟು ಬೇರ್ಯಾರೂ ಇರುವುದಿಲ್ಲ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News