ಭಾರತ ಸೇವಾದಳದಿಂದ ಮಕ್ಕಳ ಭಾವೈಕ್ಯತಾ ಮೇಳ
ಮಂಗಳೂರು, ಫೆ. 5: ಮಂಗಳೂರು ತಾಲೂಕು ಭಾರತ ಸೇವಾ ದಳ ವತಿಯಿಂದ ನಗರದ ಕಪಿತಾನಿಯೋ ಶಾಲಾ ಮೈದಾನದಲ್ಲಿ ಮಕ್ಕಳ ಭಾವೈಕ್ಯತಾ ಮೇಳವು ಮಂಗಳವಾರ ಜರುಗಿತು. ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಧ್ವಜಾರೋಹಣಗೈದರು. ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು.
ಮೇಳವನ್ನು ಉದ್ಫಾಟಿಸಿ ಮಾತನಾಡಿದ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ ಸೇವಾದಳದ ಸ್ಥಾಪಕ ಡಾ.ನಾ.ಸು. ಹರ್ಡೀಕರ್ ಮಹಾತ್ಮಾ ಗಾಂಧೀಜಿಯ ಒಡನಾಡಿಯಾಗಿದ್ದರು. ಮಕ್ಕಳಿಗೆ ಹಾಗೂ ಯುವಕರಿಗೆ ಶಿಸ್ತು ಮೂಡಿಸುವ ಸಲುವಾಗಿ ಹರ್ಡೀಕರ್ ಪ್ರಾರಂಭಿಸಿದ ಸೇವಾದಳವು, ರಾಜ್ಯಾದ್ಯಂತ ಹೆಚ್ಚಿನ ಶಾಲೆಯಲ್ಲಿ ಶಾಖೆಗಳನ್ನು ಹೊಂದಿದೆ. ಅವರ ಶಿಸ್ತಿನ ಜೀವನ ಎಲ್ಲಾ ಮಕ್ಕಳಿಗೆ ಆದರ್ಶವಾಗಲಿ ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಶ್ ಕದ್ರಿ, ಬೋಳಾರ ಮುಖ್ಯಪ್ರಾಣ ದೇವಸ್ಥಾನದ ಅಧ್ಯಕ್ಷ ನವೀನ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗುರುಪ್ರವೀಣ್ ಭಟ್, ಶಾಲೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಸೆಲೀನಾ, ಸೇವಾದಳದ ಕೇಂದ್ರೀಯ ಸಮಿತಿ ಸದಸ್ಯ ವಿ.ವಿ.ಫ್ರಾನ್ಸಿಸ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಸೇವಾದಳ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ತಾಲೂಕು ಉಪಾಧ್ಯಕ್ಷ ಉದಯ ಕುಂದರ್, ಜಿಲ್ಲಾ ಸಂಘಟಕ ಮಂಜೇಗೌಡ, ಕಾರ್ಪೊರೇಟರ್‌ಗಳಾದ ಆಶಾ ಡಿಸಿಲ್ವ, ಕೇಶವ ಮರೋಳಿ, ಸುಮಯ್ಯಿ ಅಶ್ರಫ್, ಶಿಕ್ಷಣ ಪರಿವೀಕ್ಷರಾದ ವಿಷ್ಣು ಹೆಬ್ಬಾರ್, ಆಶಾ, ಸಂಚಾರ ಪೊಲೀಸ್ ನಿರೀಕ್ಷಕ ಗುರುದತ್ ಕಾಮತ್, ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥ ದೇವೇಂದ್ರ, ತಾಲೂಕು ಕಾರ್ಯದರ್ಶಿ ರೆಹನಾ ಬಜಾಲ್ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಮಾಧವ ಮಯ್ಯ ಕಾರ್ಯಕ್ರಮ ನಿರೂಪಿಸಿದರು.