×
Ad

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: 3 ಸಾಕ್ಷಿಗಳ ವಿಚಾರಣೆ

Update: 2019-02-05 21:58 IST

ಉಡುಪಿ, ಫೆ. 5: ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೂರು ಸಾಕ್ಷಿಗಳ ವಿಚಾರಣೆ ನಡೆಸಲಾಯಿತು.

ನಕಾಶೆ ತಯಾರಿಸಿದ ಉಡುಪಿ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಸೋಮನಾಥ, ಸಿಐಡಿಯ ತಾಂತ್ರಿಕ ತಜ್ಞರಾದ ಕಿರಣ್ ಕುಮಾರ್ ಹಾಗೂ ಮುನಿರತ್ನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರ ಶೇಖರ್ ಎಂ.ಜೋಶಿ ಮುಂದೆ ಸಾಕ್ಷ ನುಡಿದರು.

ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತ ರಾಮ್ ಶೆಟ್ಟಿ ಹಾಗೂ ಅಡ್ಡ ವಿಚಾರಣೆಯನ್ನು ಆರೋಪಿಗಳ ಪರ ವಕೀಲ ತೋನ್ಸೆ ನಾರಾಯಣ ಪೂಜಾರಿ ನಡೆಸಿದರು. ಆರೋಪಿ ಪರ ವಕೀಲರಾದ ಅರುಣ್ ಬಂಗೇರ, ವಿಕ್ರಂ ಹೆಗ್ಡೆ ಉಪಸ್ಥಿತರಿದ್ದರು.

ವಿಚಾರಣೆ ಸಂದರ್ಭ ಬೆಂಗಳೂರಿನ ಕಾರಾಗೃಹದಲ್ಲಿರುವ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತು ಜಾಮೀನ ನಲ್ಲಿ ಬಿಡುಗಡೆಗೊಂಡಿರುವ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಹಾಗೂ ಸಾಕ್ಷನಾಶ ಆರೋಪಿ ಶ್ರೀನಿವಾಸ ಭಟ್ ನ್ಯಾಯಾಲಯದಲ್ಲಿ ಹಾಜರಿದ್ದರು. ಇನ್ನೋರ್ವ ಆರೋಪಿ ಾಘವೇಂದ್ರ ಗೈರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News