ಅಂದರ್ ಬಾಹರ್: ಐವರ ಸೆರೆ

Update: 2019-02-05 16:32 GMT

ಬ್ರಹ್ಮಾವರ, ಫೆ.5: ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ತನ್ವೀರ್ ಜಾಮದಾರ್, ಇಮ್ತಿಯಾಜ್, ಮೊಹಮ್ಮದ್ ಜಮೀರ್, ಸಲ್ವಾಫ್, ಮೊಹಮ್ಮದ್ ಅರ್ಫಾತ್ ಎಂಬವರನ್ನು ಬ್ರಹ್ಮಾವರ ಪೊಲೀಸರು ಫೆ.4ರಂದು ಅಪರಾಹ್ನ ವೇಳೆ ಬಂಧಿಸಿ, 9,020 ರೂ. ಹಾಗೂ ಏಳು ಮೊಬೈಲ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News