ಅಪಘಾತ ಎಸಗಿ ಕೊಲೆಗೆ ಯತ್ನ: ದೂರು
Update: 2019-02-05 22:05 IST
ಮಣಿಪಾಲ, ಫೆ.5: ಕಾರನ್ನು ಬೈಕಿಗೆ ಢಿಕ್ಕಿ ಹೊಡೆಸುವ ಮೂಲಕ ಬೈಕ್ ಸವಾರನ ಕೊಲೆಗೆ ಯತ್ನ ನಡೆಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೂಡೆಯ ಮಹಮ್ಮದ್ ಹರ್ಷದ್ ಎಂಬವರು ಮಣಿಪಾಲದ ಮಾಂಡವಿ ಎಮಾರಾಲ್ಡ್ ಕಟ್ಟಡದಲ್ಲಿರುವ ಟಿಟಿಎಸ್ ಕಂಪೆನಿಯಲ್ಲಿ ಸಂತೋಷ್ ಎಂಬಾ ತನ ಜೊತೆ ಎಲೆಕ್ಷ್ಟೀಶಿಯನ್ ಕೆಲಸ ಮಾಡಿಕೊಂಡಿದ್ದು, ಇತ್ತಿಚಿನ ದಿನಗಳಲ್ಲಿ ಸಂತೋಷ್ ಮತ್ತು ಹರ್ಷದ್ ಮಧ್ಯೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.
ಇದೇ ಧ್ವೇಷದಲ್ಲಿ ಫೆ.4ರಂದು ರಾತ್ರಿ 9:30 ಗಂಟೆಗೆ ಸ್ನೇಹಿತ ವ್ನಿೇಶ್ ಎಂಬಾತನ ಜೊತೆ ಮನೆಗೆ ಹೋಗುತ್ತಿದ್ದ ಮಹಮ್ಮದ್ ಹರ್ಷದ್ ಬೈಕ್‌ಗೆ ಪೆರಂಪಳ್ಳಿ ರಸ್ತೆಯ ಶಾಂಭವಿ ಹೆಬಿಟೆಡ್ ಬಿಲ್ಡಿಂಗ್ ಬಳಿ ಹಿಂದಿನಿಂದ ಬಂದ ಸಂತೋಷ್ ಕಾರು ಢಿಕ್ಕಿ ಹೊಡೆಯಿತು. ಈ ಮೂಲಕ ಸಂತೋಷ್ ಕೊಲೆಗೆ ಯತ್ನಿಸಿರುವುದಾಗಿ ದೂರಲಾಗಿದೆ.
ಇದರಿಂದ ಗಾಯಗೊಂಡಿರುವ ಹರ್ಷದ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.