ಹೊಸತನದ ಹುಡುಕಾಟಕ್ಕೆ ಸಂಶೋಧನೆಯ ಅಗತ್ಯವಿದೆ: ಡಾ. ರಶ್ಮಿ ಕೋಡಿಕಲ್
Update: 2019-02-05 22:07 IST
ಮಂಗಳೂರು, ಫೆ.5: ವಿದ್ಯಾರ್ಥಿ ದೆಸೆಯಿಂದಲೇ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಅಧ್ಯಯನದ ಮೂಲಕ ವಿಜ್ಞಾನ ವಿಭಾಗಕ್ಕೆ ಕೊಡುಗೆ ನೀಡುವಲ್ಲಿ ಶ್ರಮಿಸಬೇಕು. ಹಾಗೇ ಹೊಸತನದ ಹುಡುಕಾಟಕ್ಕೆ ಸಂಶೋಧನೆಯ ಅಗತ್ಯವಿದೆ ಎಂದು ಡಾ. ರಶ್ಮಿ ಕೋಡಿಕಲ್ ಹೇಳಿದರು.
ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಎಂ.ಕಾಂ. ಹಾಗೂ ಎಂ.ಬಿ.ಎ.(ಐಬಿ) ವಿಭಾಗ ಆಯೋಜಿಸಿದ ಸಂಶೋಧನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ. ಭಾರತದಲ್ಲಿ ಸಂಶೋಧನೆಯನ್ನು ಕಲಿಕೆಯ ಜೊತೆ ನೀಡುವ ಆವಶ್ಯಕತೆ ಇದ್ದು, ಇಂತಹ ಕಾರ್ಯಗಾರಗಳು ಅವುಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ ಎಂದರು.
ಎಂ.ಕಾಂ. ಮತ್ತು ಎಂ.ಬಿ.ಎ.(ಐಬಿ) ವಿಭಾಗದ ಸಂಯೋಜಕ ಡಾ.ಎ.ಸಿದ್ದೀಕ್, ಉಪನ್ಯಾಸಕ ಮಿಥುನ್ ಚಂದ್ರ ಉಪಸ್ಥಿತರಿದ್ದರು. ಕಾರ್ಯಗಾರದ ಸಂಯೋಜಕ ವೆಂಕಟೇಶ್ ನಾಯಕ್ ವಂದಿಸಿದರು. ಉಪನ್ಯಾಸಕಿ ಕಾವ್ಯಾ ಪಿ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.