ಎಸ್ಡಿಪಿಐ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ
ಉಳ್ಳಾಲ, ಫೆ. 5: ಎಸ್ಡಿಪಿಐ ವತಿಯಿಂದ ಫೆ 1ರಿಂದ 28ರ ವರೆಗೆ ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನವನ್ನು ಕೈಗೊಂಡಿದ್ದು, ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿಯೂ ನಡೆದಿರುತ್ತದೆ.
ಈ ಕಾರ್ಯಕ್ರಮದಲ್ಲ್ಲಿ ಬಾಬರಿ ಎಕ್ಸ್ಪೋ, ಕವಿಗೋಷ್ಠಿ, ನಾಟಕ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಫರ್ದೆ, ಕ್ವಿಝ್ ಅನ್ನು ಏರ್ಪಡಿಸಲಾಗಿತ್ತು. ಈ ಮೂಲಕ ದೇಶಕ್ಕೆ ಆದಂತಹ ಅನ್ಯಾಯವನ್ನು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾದ ಅವಮಾನವನ್ನು ಜನತೆಗೆ ತಿಳಿಸಲು ಸಾಧ್ಯವಾಗಿದೆ. ಆದರೆ ಕಾರ್ಯಕ್ರಮ ಶಿಸ್ತು ಬದ್ಧವಾಗಿ ಮುಗಿದ ನಂತರ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿದು ಸ್ವಯಂಪ್ರೇರಿತವಾಗಿ ಜಿಲ್ಲಾಧ್ಯಕ್ಷರು ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜಿಲ್ಲೆಯಲ್ಲಿ ದ್ವೇಷ ರಾಜಕೀಯ ಹರಡಿಸುವಂತಹ, ಶಾಂತಿ ಕೆಡಿಸುವಂತಹ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದು ಪೊಲೀಸ್ ಇಲಾಖೆಯ ಕ್ರಮವನ್ನು ಎಸ್‌ಡಿಪಿಐ ಖಂಡಿಸಿ ಉಳ್ಳಾಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣವನ್ನು ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾಡಿ ಉಸ್ತುವಾರಿ ಸಚಿವರ ಕುಮ್ಮಕ್ಕುನಿಂದಲೇ ಆಡಳಿತ ದುರುಪಯೋಗ ಮಾಡಿಕೊಂಡು ಪೊಲೀಸರ ಮೂಲಕ ಒತ್ತಡ ಹೇರಿ ಈ ರೀತಿಯ ಧ್ವೇಷ ರಾಜಕೀಯವನ್ನು ನಡೆಸಿರುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಗೂಡಿನಬಳಿ ಮಾತನಾಡಿದರು, ಅಬ್ಬಾಸ್ ಕೀನ್ಯ, ಅಬ್ಬಾಸ್ ಎ.ಆರ್, ಝಾಹಿದ್ ಮಲಾರ್, ಸಿದ್ದೀಕ್ ಉಳ್ಳಾಲ, ಲತೀಫ್ ಕೊಡಿಜಾಲ್,ರವೂಫ್ ಉಳ್ಳಾಲ,ನಿಝಾಮ್ ,ಉಳ್ಳಾಲ ನಗರ ಪಂಚಾಯತ್ ಸದಸ್ಯರಾದ ರಮೀಝ್, ಅಸ್ಗರ್ ಆಲಿ ಮತ್ತು ಇತರರು ಉಪಸ್ಥಿತರಿದ್ದರು.