ಮಂಜನಾಡಿ: ಅಲ್ ಮದೀನಾದಲ್ಲಿ ಹನಫೀ ಕಾನ್ಫರೆನ್ಸ್
Update: 2019-02-06 18:34 IST
ಮಂಗಳೂರು, ಫೆ.6: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಅಲ್ ಮದೀನಾದಲ್ಲಿ ಹನಫೀ ಕಾನ್ಫರೆನ್ಸ್ ಜರುಗಿತು.
ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಹನಫೀ ಕಾನ್ಫರೆನ್ಸ್‌ನಲ್ಲಿ ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ದುಆಗೈದರು.
ಮೌಲಾನಾ ಹೈದರ್ ಅಲಿ ನಿಝಾಮಿ ಶಿವಮೊಗ್ಗ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅಜ್ಮೀರ್ ದರ್ಗಾದ ಉಪಾಧ್ಯಕ್ಷ ಸೈಯದ್ ಬಾಬರ್ ಅಶ್ರಫ್, ದಾವಣಗೆರೆಯ ಇಬ್ರಾಹಿಂ ಸಖಾಫಿ ಭಾಗವಹಿಸಿ ಮಾತನಾಡಿದರು.
ಮನ್ಶರ್ ಮುದರ್ರಿಸ್ ಮೌಲಾನಾ ಯೂಸುಫ್ ಅಮ್ಜದಿ ಮುಖ್ಯ ಪ್ರಭಾಷಣಗೈದರು. ವೇದಿಕೆಯಲ್ಲಿ ಇಸ್ಮಾಯಿಲ್ ಮದನಿ ತಂಙಳ್ ಉಜಿರೆ, ಡಾ. ಅಬ್ದುರ್ರಶೀದ್ ಝೈನಿ, ಉಮರ್ ಸಖಾಫಿ ಎಡಪ್ಪಾಲ್ ಉಪಸ್ಥಿತರಿದ್ದರು.
ಹಸನ್ ಅಬ್ರಾರ್ ಫಾಝಿಲ್ ಬಿಹಾರ್ ಸ್ವಾಗತಿಸಿದರು. ನಾರ್ತ್ ಕರ್ನಾಟಕ ಹೋಂ ಮೇಲ್ವಿಚಾರಕ ಬದ್ರುಲ್ ಮುನೀರ್ ಹಿಮಮಿ ಕಾರ್ಯಕ್ರಮವನ್ನು ನಿರೂಪಿಸಿದರು.