ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಮುಸ್ಲಿಂ ಯೂತ್ ಲೀಗ್ ವತಿಯಿಂದ ಪ್ರತಿಭಟನೆ

Update: 2019-02-06 14:41 GMT

ಮಂಜೇಶ್ವರ, ಫೆ. 6: ಪೊಲೀಸರಿಗೆ ಸಂಘಪರಿವಾರದ ಮೇಲಿನ ನಿಲುವು ಹಾಗೂ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಹಾಗೂ ಕುಂಬಳೆ ಪೊಲೀಸ್ ಠಾಣೆಗಳಿಗೆ ಬುಧವಾರ ಪ್ರತಿಭಟನಾ ಮಾರ್ಚ್ ನಡೆಸಲಾಯಿತು.

ಮಂಜೇಶ್ವರ ನೋಂದಾವಣಾ ಕಚೇರಿ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಮಂಜೇಶ್ವರ ಠಾಣಾ ಮುಂಭಾಗದಲ್ಲಿ ಪೊಲೀಸರು ತಡೆದರು.

ಜ.3 ರಂದು ಕೇರಳದಲ್ಲಿ ಬಿಜೆಪಿ ಹರತಾಳದ ಮರೆಯಲ್ಲಿ ಮಂಜೇಶ್ವರದ ಕೆಲವೊಂದು ಪ್ರದೇಶದಲ್ಲಿ ಸಂಘಪರಿವಾರದ ಗೂಂಡಾಗಳು ಒಂದು ಸಮುದಾಯವನ್ನೇ ಗುರಿಯಾಗಿರಿಸಿ ಘರ್ಷಣೆಗೆ ಇಳಿದು ಅವರ ಸೊತ್ತು ಹಾಗೂ ಜೀವ ಹಾನಿಗೆ ಕಾರಣವಾಗಿತ್ತು. ಆದರೆ ಈ ಗಲಭೆ ನಡೆಸಿದವರು ರಾಜಾ ರೋಷವಾಗಿ  ಬೀದಿ ಬೀದಿಗಳಲ್ಲಿ ಅಲೆದಾಡುತಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ ಯೂತ್ ಲೀಗ್ ಪೊಲೀಸ್ ಠಾಣೆಗೆ ಪ್ರತಿಭಟನಾ ಮಾರ್ಚ್ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.

ಮಂಜೇಶ್ವರ ಠಾಣಾ ಮುಂಭಾಗದಲ್ಲಿ ಸೈಫುಲ್ಲಾ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲಾಧ್ಯಕ್ಷ  ಟಿ ಎ ಮೂಸಾ ಉದ್ಘಾಟಿಸಿದರು.

ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎ ಕೆ ಎಂ ಅಶ್ರಫ್ ಮುಖ್ಯ ಭಾಷಣ ಮಾಡಿದರು. ನೇತಾರರಾದ ಸತ್ತಾರ್ ಹಾಜಿ, ಅಬ್ದುಲ್ ಅಝೀಝ್ ಹಾಜಿ, ಶುಕೂರ್ ಹಾಜಿ, ಅಬ್ದುಲ್ ರಹ್ಮಾನ್ ಯು ಎಚ್, ಝಡ್ ಎ ಕಯ್ಯಾರ್, ಬಶೀರ್ ಮೊಗರು, ಮುಕ್ತಾರ್ ಎ, ಸಿದ್ದೀಖ್ ಮಂಜೇಶ್ವರ, ಮುಸ್ತಫ ಉದ್ಯಾವರ ಮೊದಲಾದವರು ನೇತೃತ್ವ ನೀಡಿದರು. ರಝಾಕ್ ಆಚಕರೆ ಸ್ವಾಗತಿಸಿ, ಅಬ್ದುಲ್ ಮಜೀದ್ ಮಚ್ಚಂಪ್ಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News