×
Ad

ರೈಲಿನಲ್ಲಿ ಡೀಸೆಲ್ ಸಾಗಾಟ; ಯುವಕನ ಬಂಧನ

Update: 2019-02-06 20:17 IST

ಉಡುಪಿ, ಫೆ.6: ರೈಲ್ವೆ ಸುರಕ್ಷತಾ ದಳದ ಅಧಿಕಾರಿಗಳು ಫೆ.6ರಂದು ಗಸ್ತು ತಿರುಗುತ್ತಿದ್ದ ವೇಳೆ ಭಟ್ಕಳದಿಂದ ಉಡುಪಿಗೆ ಡೀಸೆಲ್ ಕೊಂಡು ಹೋಗುತ್ತಿದ್ದ ಯುವಕನೊಬ್ಬನನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಈತ ಡೀಸೆಲ್‌ನ್ನು ಉಡುಪಿಯಲ್ಲಿ ತನ್ನ ಟ್ರಾಕ್ಟರ್ ಓಡಿಸಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ ರೈಲ್ವೆ ನಿಯಮಗಳ ಪ್ರಕಾರ ಪ್ಯಾಸೆಂಜರ್ ರೈಲಿನಲ್ಲಿ ಡೀಸೆಲ್‌ನಂತಹ ಅಪಾಯಕಾರಿ ವಸ್ತುಗಳನ್ನು ಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಈತನನ್ನು ಬಂಧಿಸಿ, ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಶಿಕ್ಷೆ ವಿಧಿಸಲಾಗಿದೆ.

ರೈಲ್ವೆ ನಿಯಮಗಳ ಪ್ರಕಾರ ಪ್ಯಾಸೆಂಜರ್ ರೈಲಿನಲ್ಲಿ ಡೀಸೆಲ್‌ನಂತಹ ಅಪಾಯಕಾರಿ ವಸ್ತುಗಳನ್ನು ಕೊಂಡು ಹೋಗುವುದು ಅಪಾಯಕಾರಿ ಹಾಗೂ ಶಿಕ್ಷಾರ್ಹವಾಗಿದೆ. ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಅಪಾಯಕಾರಿ ವಸ್ತುಗಳನ್ನು ಪ್ಯಾಸೆಂಜರ್ ರೈಲಿನಲ್ಲಿ ಕೊಂಡು ಹೋಗದಂತೆ ರೈಲ್ವೇ ಸುರಕ್ಷತಾ ದಳದ ಇನ್ಸ್‌ಪೆಕ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News