ಮಟ್ಕಾ ಚೀಟಿ ದಂಧೆಯಲ್ಲಿ ತೊಡಗಿಸಿಕೊಂಡ ಇಬ್ಬರ ಸೆರೆ
Update: 2019-02-06 21:23 IST
ಮಂಗಳೂರು, ಫೆ.6: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕೆ ಸಂಕದ ಬಳಿ ಮಂಗಳವಾರ ‘ಮಟ್ಕಾ’ ಎಂಬ ಅದೃಷ್ಟ ಆಟದ ಚೀಟಿ ಬರೆದು ಹಣ ಸಂಗ್ರಹ ಮಾಡುತ್ತಿದ್ದ, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಮಣ್ಣಗುಡ್ಡ ನಿವಾಸಿ ಪ್ರಶಾಂತ್ ಕುಮಾರ್ (42) ಮತ್ತು ಸರಕಾರಿ ಪ್ರೌಢಶಾಲೆಯ ಸಮೀಪದ ನಿವಾಸಿ ಅಬ್ದುಲ್ ಲತೀಫ್ (45) ಬಂಧಿತ ಆರೋಪಿಗಳು. ಇವರಿಂದ 15,400 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಸಿಸಿಬಿ ಎಸ್ಸೈ ಕಬ್ಬಳ್‌ರಾಜ್, ಬರ್ಕೆ ಅಪರಾಧ ವಿಭಾಗದ ಎಸ್ಸೈ ಶೋಭಾ, ಎಸ್ಸೈ ಲೋಕೇಶ್ವರ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.