ಮನೆಯಲ್ಲಿ ವೇಶ್ಯಾವಟಿಕೆಯನ್ನು ನಡೆಸುತ್ತಿದ್ದ ಆರೋಪಿಗಳ ಬಂಧನ
ಮಂಗಳೂರು, ಫೆ.6: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಡೈಮಂಡ್ ಹೋಮ್ ಬಳಿಯ ಮನೆಯೊಂದರಲ್ಲಿ ವೇಶ್ಯಾವಟಿಕೆ ನಡೆಯುತ್ತಿದ್ದ ಜಾಲವನ್ನು ಬಜ್ಪೆ ಪೊಲೀಸರು ಮಂಗಳವಾರ ಪತ್ತೆ ಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಬಂಧಿತರನ್ನು ಉಡುಪಿಯ ಕುತ್ಯಾರು ಗ್ರಾಮದ ಶಿವಾನಂದ (45), ಪಂಜಿಮೊಗರು ಗ್ರಾಮದ ನಿರಂಜನ್ ಆರ್. ಕೋಟ್ಯಾನ್ (42), ಮುನ್ನೂರು ಗ್ರಾಮದ ಕುತ್ತಾರ್ ಪದವು ನಿವಾಸಿ ಎಂ.ಬಿ. ಇಸ್ಮಾಯೀಲ್ (35), ಮಂಜೇಶ್ವರ ಸಮೀಪದ ಮೀಂಜ ನಿವಾಸಿ ಕಡವಲಪ್ಪು ಮುಹಮ್ಮದ್ ಅಬ್ಬುಸಲೀಂ (42) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಠಾಣೆಯ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದಾಗ ನಾಲ್ಕು ಮಂದಿ ಸೆರೆ ಸಿಕ್ಕರೆ, ಮುನ್ನ ಎಂಬಾತ ತಲೆಮರೆಸಿಕೊಂಡ ಎನ್ನಲಾಗಿದೆ.
ಕಾರ್ಯಚಾರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈ ಹರೀಶ್, ಸುಬ್ರಹ್ಮಣ್ಯ ಮತ್ತು ಬಜ್ಪೆ ಇನ್‌ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಎಸ್ಸೈ ಶಂಕರ ನಾಯರಿ ಹಾಗೂ ಬಜ್ಪೆ ಠಾಣೆಯ ಸಿಬ್ಬಂದಿಗಳಾದ ಲಾವಣಿ, ರಕ್ಷಿತಾ, ರಾಜೇಶ್ ಮತ್ತು ಲಕ್ಷ್ಮಣ ಕಾಂಬ್ಳೆ, ಕಿಷ್ಟಪ್ಪರಾಥೋಡ್ ಪಾಲ್ಗೊಂಡಿದ್ದರು.