×
Ad

ಮಾಲ್ವಾನ್ ಸಮುದ್ರ ಮಧ್ಯೆ ಬೋಟಿನ ಕ್ಯಾಬಿನ್ ಭಾಗ ಪತ್ತೆ

Update: 2019-02-06 21:50 IST

ಉಡುಪಿ, ಫೆ.6: ಮಹಾರಾಷ್ಟ್ರ ರಾಜ್ಯದ ಮಾಲ್ವನ್ ಸಮುದ್ರ ಮಧ್ಯೆ ಸ್ಥಳೀಯ ಮೀನುಗಾರಿಗೆ ದೊರೆತಿರುವ ಬೋಟಿನ ಕ್ಯಾಬಿನ್ ಭಾಗವು ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನದ್ದಲ್ಲ ಎಂದು ಮಲ್ಪೆ ಮೀನುಗಾರರು ಹಾಗೂ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ.

ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಮಹಾರಾಷ್ಟ್ರದ ಮೀನುಗಾರರಿಗೆ ಫೆ.5ರಂದು ನೀರಿನಲ್ಲಿ ತೇಲುತ್ತಿದ್ದ ಬೋಟಿನ ಕ್ಯಾಬಿನ್‌ನ ಭಾಗವೊಂದು ದೊರೆ ತಿತ್ತು. ಈ ಬಗ್ಗೆ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಭಾಗ ಸುವರ್ಣ ತ್ರಿಭುಜ ಬೋಟಿನದ್ದೆ ಎಂಬುದು ಖಚಿತ ಪಡಿಸಲು ಅಲ್ಲಿನ ಪೊಲೀಸರು ಇದರ ಫೋಟೋವನ್ನು ವಾಟ್ಸಾಪ್ ಮೂಲಕ ಉಡುಪಿ ಪೊಲೀಸರಿಗೆ ಕಳುಹಿಸಿದ್ದರೆನ್ನಲಾಗಿದೆ. ಉಡುಪಿಯ ಪೊಲೀಸರು ಆ ಫೋಟೋ ವನ್ನು ಮಲ್ಪೆ ಮೀನುಗಾರರ ಮುಖಂಡರಿಗೆ ಕಳುಹಿಸಿದ್ದು, ಇದನ್ನು ಪರಿಶೀಲಿ ಸಿದ ಮಲ್ಪೆ ಮೀನುಗಾರರು ಹಾಗೂ ನಾಪತ್ತೆಯಾದವರ ಕುಟುಂಬದವರು ಈ ಭಾಗ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನದ್ದಲ್ಲ ಎಂದು ಖಚಿತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News