×
Ad

ಪ್ರದೀಪ್ ಸಿಂಗ್ ಖರೋಲಾ ನಾಗರಿಕ ವಿಮಾನಯಾನ ಕಾರ್ಯದರ್ಶಿ

Update: 2019-02-06 22:10 IST

 ಹೊಸದಿಲ್ಲಿ, ಫೆ.6: ಏರ್‌ಇಂಡಿಯಾ ಮುಖ್ಯಸ್ಥ ಪ್ರದೀಪ್ ಸಿಂಗ್ ಖರೋಲಾರನ್ನು ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಬುಧವಾರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಜನವರಿ 31ರಂದು ಸೇವಾ ನಿವೃತ್ತಿ ಹೊಂದಿರುವ ರಾಜೀವ್ ನಯನ್ ಚೌಬೆಯವರ ಸ್ಥಾನದಲ್ಲಿ ಖರೋಲರನ್ನು ನೇಮಿಸಲಾಗಿದೆ. ಕರ್ನಾಟಕ ಕೇಡರ್‌ನ 1985ರ ಬ್ಯಾಚ್ ಐಎಎಸ್ ಅಧಿಕಾರಿ ಖರೋಲಾರನ್ನು 2017ರಲ್ಲಿ ಏರ್‌ಇಂಡಿಯಾ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರನ್ನಾಗಿ ಸರಕಾರ ನೇಮಿಸಿತ್ತು. 2018ರ ಜನವರಿ 9ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.

ಜೊತೆಗೆ, ಕ್ರೀಡಾ ಇಲಾಖೆಯ ಕಾರ್ಯದರ್ಶಿಯನ್ನಾಗಿ ಹಿರಿಯ ಅಧಿಕಾರಿ ರಾಧೇಶ್ಯಾಮ್ ಜುಲಾನಿಯಾರನ್ನು ರಾಹುಲ್ ಪ್ರಸಾದ್ ಭಟ್ನಾಗರ್ ಸ್ಥಾನದಲ್ಲಿ ನೇಮಿಸಲಾಗಿದೆ. ಭಟ್ನಾಗರ್‌ರನ್ನು ಪಂಚಾಯತ್‌ರಾಜ್ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಶೈಲೇಶ್‌ರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇವರು ಈಗ ನಿರ್ವಹಿಸುತ್ತಿರುವ ಅಧಿಕೃತ ಭಾಷೆ ವಿಭಾಗದ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News