ಪೆ. 8: ಹತ್ತನೇಮೈಲ್ ಕಲ್ಲು ಪುದು, ನೂತನ ಮಸೀದಿ ಉದ್ಘಾಟನೆ

Update: 2019-02-06 16:44 GMT

ಫರಂಗಿಪೇಟೆ, ಫೆ. 6: ಪುದು ಗ್ರಾಮದ ಹತ್ತನೇಮೈಲ್ ಕಲ್ಲು ಎಂಬಲ್ಲಿನ ನೂತನ ತ್ವಾಹಾ ಮಸ್ಚಿದ್ ಫೆ. 8ರಂದು ಉದ್ಘಾಟನೆ ಮತ್ತು ಖಾಝಿ ಸ್ವೀಕಾರ ನಡೆಯಲಿದೆ.

ಉದ್ಘಾಟನೆ ಮತ್ತು ಖಾಝಿ ನಿರ್ವಹನೆ ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಜಿಫ್ರಿ ಮುತ್ತು ಕೋಯ ತಂಙಳ್ ಮಾಡಲಿದ್ದಾರೆ, ಜುಮಾ ಖುತುಬ ನಿರ್ವಹಣೆ ಮತ್ತು ಖಾಝಿ ಸ್ವೀಕಾರವನ್ನು ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ಮಾಡಲಿದ್ದಾರೆ ಮತ್ತು ಝೈನುಲ್ ಆಬಿದೀನ್ ಜಿಫ್ರೀ ತಂಙಳ್, ದ.ಕ ಜಿಲ್ಲಾ ಸಚಿವ ಯುಟಿ ಖಾದರ್, ಅಬೂಝಾಹಿರ ಉಸ್ಮಾನ್ ದಾರಿಮಿ, ಖಲೀಲ್ ರಹ್ಮಾನ್ ದಾರಿಮಿ, ಅಬೂಸ್ವಾಲಿಹ್ ಪೈಝಿ, ಅನ್ಸಾರ್ ಪೈಝಿ, ಕೆಪಿ ಇರ್ಷಾದ್ ಹುಸೈನ್ ದಾರಿಮಿ, ಅಬ್ದುಲ್ ನಾಸಿರ್ ದಾರಿಮಿ, ಮಾಹಿನ್ ದಾರಿಮಿ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಮುಕ್ಕ ಸೀ ಫುಡ್ ಹಾಜಿ ಅಬ್ದುಲ್ ರಝಾಕ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಸದಸ್ಯರಾದ ನಝೀರ್ ಹತ್ತನೇ ಮೈಲ್ ಕಲ್ಲು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಸೀದಿ ಅಧ್ಯಕ್ಷ ಮುಹಮ್ಮದ್ ಆಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News