×
Ad

ಮದುಮಗಳ ಸೌಂದರ್ಯ ಅನಾವರಣಗೊಳಿಸಿದ ‘ದೇಶೀ ದುಲ್ಹನ್ ಫ್ಯಾಶನ್ ಶೋ’

Update: 2019-02-06 22:35 IST

ಮಂಗಳೂರು, ಫೆ.6: ಲಯನ್ಸ್ ಕ್ಲಬ್ ಹಾಗೂ ಚೇತನಾ ಬ್ಯೂಟಿ ಅಕಾಡೆಮಿ ಆಶ್ರಯದಲ್ಲಿ ಮಂಗಳವಾರ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ‘ದೇಶೀ ದುಲ್ಹನ್ ಫ್ಯಾಶನ್ ಶೋ’ ದೇಶೀಯ ವಧುವಿನ ಅಲಂಕಾರವನ್ನು ಪ್ರದರ್ಶನಕ್ಕೆ ವೇದಿಕೆಯಾಯಿತು.

ಉತ್ತರ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿನ ಸಾಂಪ್ರದಾಯಿಕ ವಿವಾಹಗಳ ಸಂದರ್ಭದಲ್ಲಿ ವಧುವಿನ ಅಲಂಕಾರವನ್ನು ರೂಪದರ್ಶಿಯರು ರ್ಯಾಂಪ್ ಮೇಲೆ ಪ್ರದರ್ಶಿಸುವ ಮೂಲಕ ಮಂಗಳೂರಿನಲ್ಲಿ ಫ್ಯಾಶನ್ ಲೋಕದಲ್ಲಿ ಹೊ ಅಧ್ಯಾಯಕ್ಕೆ ಮುನ್ನುಡಿ ಬರೆದರು.

ಫ್ಯಾಶನ್ ಶೋ ಎಂದಾಕ್ಷಣ ಕೇವಲ ಪಾಶ್ಚಾತ್ಯ ಸಂಸ್ಕೃತಿಯನ್ನಷ್ಟೇ ಬಿಂಬಿಸುವುದಲ್ಲ. ಬದಲಾಗಿ ನಮ್ಮ ಸಾಂಪ್ರದಾಯಿಕ ವಿವಾಹಗಳಲ್ಲಿ ಅಲಂಕರಿಸಲಾ ಗುವ ವಧುವಿನ ಸೌಂದರ್ಯವನ್ನೂ ರ್ಯಾಂಪ್ ಮೇಲೆ ತೆರೆದಿಡಬಹುದು. ಈ ಮೂಲಕ ಇಂದಿನ ಪೀಳಿಗೆಗೆ ಸಾಂಪ್ರದಾಯಿಕ ವಿವಾಹಗಳಲ್ಲಿನ ಅಲಂಕಾರ ಗಳನ್ನು ಪರಿಚಯಿಸಲು ಸಾಧ್ಯ ಎಂಬುದನ್ನು ಈ ಫ್ಯಾಶನ್ ಶೋ ಸಾಬೀತುಪಡಿಸಿತು.

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ವಿಭಿನ್ನ ಹಾಗೂ ವಿನೂತನ ಪ್ರಯೋಗವನ್ನು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ನಗರದ ಚೇತನಾ ಬ್ಯೂಟಿ ಅಕಾಡೆಮಿ ಮೂಲಕ ಮಾಡಲಾಗಿತ್ತು. ಅಕಾಡೆಮಿಯ ಮುಖ್ಯಸ್ಥರಾದ ಚೇತನಾ ಅವರು ತಮ್ಮ ಹಳೆ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನೇ ರೂಪದರ್ಶಿಗಳನ್ನಾಗಿ ಅವರ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತದ ಕೆಲ ರಾಜ್ಯಗಳ ವಿಭಿನ್ನ ಶೈಲಿಯ ವಧುವಿನ ಶೃಂಗಾರವನ್ನು ರ್ಯಾಂಪ್ ಮೂಲಕ ಅನಾವರಣಗೊಳಿಸಿದರು.

ವಿವಾಹ, ನಿಶ್ಚಿತಾರ್ಥ, ಔತಣಕೂಟ ಮೊದಲಾದ ವಿವಾಹ ಸಂಬಂಧಿ ಕಾರ್ಯಕ್ರಮಗಳಲ್ಲಿ ಮಧುವಣಗಿತ್ತಿಯರ ಸಾಂಪ್ರದಾಯಿಕ ಅಲಂಕಾರಗಳು ವಿಶೇಷವಾಗಿ ಬಹುತೇಕ ಅಲಂಕಾರಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯಿಂದ ಅಲಂಕೃತವಾಗಿದ್ದು ಈ ಫ್ಯಾಶನ್ ಶೋನ ವಿಶೇಷತೆ.

ಮಂಗಳೂರಿನ ಕೊಂಕಣಿ, ಕ್ರೈಸ್ತ, ಮುಸ್ಲಿಂ ಸಮುದಾಯದ ವಧುವಿನ ಶೃಂಗಾರದೊಂದಿಗೆ ಮರಾಠಿ, ಬಂಗಾಲಿ, ಹಾಗೂ ಉತ್ತರ ಭಾರತ ರಾಜ್ಯಗಳಲ್ಲಿನ ವಿಶೇಷ ವಧುವಿನ ಅಲಂಕಾರಗಳನ್ನು ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಪ್ರದರ್ಶಿಸಿದರು. 15 ಮಂದಿ ರೂಪದರ್ಶಿಯರು ಭಾಗವಹಿಸಿದ್ದ ಈ ಫ್ಯಾಶನ್ ಶೋನಲ್ಲಿ ನವರಾತ್ರಿಯಲ್ಲಿ ಶಾರದಾ ಮಾತೆಯ ವಿಶೇಷ ಅಲಂಕಾರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News