ಫೆ.27, 28: ಟ್ರಂಪ್-ಕಿಮ್ 2ನೇ ಶೃಂಗ ಸಮ್ಮೇಳನ

Update: 2019-02-06 17:07 GMT

ವಾಶಿಂಗ್ಟನ್, ಫೆ. 6: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಜೊತೆ ವಿಯೆಟ್ನಾಮ್‌ನಲ್ಲಿ ಫೆಬ್ರವರಿ 27 ಮತ್ತು 28ರಂದು ಎರಡು ದಿನಗಳ ಕಾಲ ಶೃಂಗ ಸಮ್ಮೇಳನ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ.

ಉತ್ತರ ಕೊರಿಯ ತನ್ನ ಪರಮಾಣು ಕಾರ್ಯಕ್ರಮವನ್ನು ತೊರೆಯುವಂತೆ ಈ ಎರಡು ದಿನಗಳ ಸಮ್ಮೇಳನದ ವೇಳೆ ಕಿಮ್‌ರನ್ನು ಒತ್ತಾಯಿಸುವುದಾಗಿ ಮಂಗಳವಾರ ಸಂಸತ್ತು ಕಾಂಗ್ರೆಸ್‌ನಲ್ಲಿ ಮಾಡಿದ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ ಅವರು ಹೇಳಿದರು.

ಇದು ಅಮೆರಿಕ ಮತ್ತು ಉತ್ತರ ಕೊರಿಯದ ನಡುವಿನ ಎರಡನೇ ಶೃಂಗ ಸಮ್ಮೇಳನವಾಗಿದೆ. ಮೊದಲ ಶೃಂಗ ಸಮ್ಮೇಳನ ಕಳೆದ ವರ್ಷದ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News