×
Ad

ಕಾವೂರು: ಇಂದು 'ಇನ್‌ಲ್ಯಾಂಡ್ ಸನ್ ಲೈಟ್' ಮಾದರಿ ಫ್ಲ್ಯಾಟ್ ಉದ್ಘಾಟನೆ

Update: 2019-02-07 12:47 IST

ಮಂಗಳೂರು, ಫೆ.7: ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇನ್-ಲ್ಯಾಂಡ್ ಬಿಲ್ಡರ್ಸ್ ನಗರದ ಕೂಳೂರು-ಕಾವೂರು ಪ್ರಧಾನ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಸಮುಚ್ಚಯ 'ಇನ್-ಲ್ಯಾಂಡ್ ಸನ್‌ಲೈಟ್‌'ನಲ್ಲಿ ವಿನೂತನ ಮಾದರಿ ಫ್ಲ್ಯಾಟನ್ನು ಪ್ರಸ್ತುತಪಡಿಸುತ್ತಿದೆ. "ವಿನೂತನ ಮಾದರಿಯಲ್ಲಿ ನಿರ್ಮಾಣವಾಗಿರುವ, ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ವಸತಿ ಸಮುಚ್ಚಯದ ಅತ್ಯುನ್ನತ ಗುಣಮಟ್ಟದ ನಿರ್ಮಾಣ ನೋಟವನ್ನು ತೋರಿಸುವ ಸಲುವಾಗೆ ಫೆ.7ರಂದು ಅತ್ಯಂತ ಆಕರ್ಷಕ ಮಾದರಿ ಫ್ಲ್ಯಾಟನ್ನು ಅನಾವರಣಗೊಳಿಸಲಾಗುವುದು.  ಫೆ.7ರಂದು ಸಂಜೆ 4 ಗಂಟೆಗೆ ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ 'ಸನ್‌ಲೈಟ್‌'ನ ಮಾದರಿ ಫ್ಲ್ಯಾಟನ್ನು ಉದ್ಘಾಟಿಸುವವರು" ಎಂದು ಇನ್-ಲ್ಯಾಂಡ್ ಬಿಲ್ಡರ್ಸ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

ನಾವು ನಿರಂತರವಾಗಿ ಗ್ರಾಹಕರ ಅಗತ್ಯ ಹಾಗೂ ಅವಶ್ಯಕತೆಗಳಿಗೆ ಪೂರಕವಾಗೆ ವಸತಿ ಸಮುಚ್ಚಯಗಳ ನಿರ್ಮಾಣ ಮಾಡುತ್ತೇವೆ ಎಂಬ ಬಗ್ಗೆ ಹೆಮ್ಮೆಯಿದೆ. ಪ್ರಸಕ್ತ ಪೀಳಿಗೆಯು ವೃತ್ತಿಪರ ಹಾಗೂ ಮೌಲ್ಯಕ್ಕೆ ಬೆಲೆ ಕೊಡುವಂತಹವರು. ಹೆಚ್ಚಿನವರು ಉನ್ನತ ಕಂಪೆನಿಗಳಲ್ಲಿ ಹಾಗೂ ವಿದೇಶಗಳಲ್ಲಿ ಉದ್ಯೋಗದಲ್ಲಿರುತ್ತಾರೆ. ಮನೆ ಅಥವಾ ಹೂಡಿಕೆಗಾಗಿ ಅವರು ವ್ಯಯ ಮಾಡುವ ಪ್ರತಿಯೊಂದು ರೂಪಾಯಿಯ ಮೌಲ್ಯಯೂ ನ್ಯಾಯಯುತವಾಗಿರಲು ಬಯಸುತ್ತಾರೆ. ಅಂತಹ ಗ್ರಾಹಕರಿಗೆ ರೆರಾ ಅಂಗೀಕೃತ ಸನ್ ಲೈಟ್-ಮೂನ್ ಲೈಟ್ ವಸತಿ ಸಮುಚ್ಚಯ ತಾವು ಬಯಸಿದ್ದನ್ನು ಹೆಚ್ಚು ಖರ್ಚು ಮಾಡದೆಯೇ ತರ್ಕಬದ್ದವಾದ ಬೆಲೆಯಲ್ಲಿ ಪಡೆಯಲು ಒಂದು ಸುವರ್ಣಾವಕಾಶ ಎಂದು ಕಂಪನಿಯ ಆಡಳಿತ ನಿರ್ದೇಶಕರು ತಿಳಿಸಿದ್ದಾರೆ.

ಮಾದರಿ ಫ್ಯಾಟ್ ನ ಅನಾವರಣದ ಸಂದರ್ಭ ಇನ್‌ಲ್ಯಾಂಡ್ ಸಂಸ್ಥೆ ಈ ಬಾರಿ ಉತ್ತಮ ರಿಯಾತಿಯನ್ನು ನೀಡುತ್ತಿದೆ. ಈ ಕೊಡುಗೆಯು ಒಂದು ವಾರಕ್ಕೆ ಸೀಮಿತವಾಗಿದ್ದು, ಫೆಬ್ರವರಿ 15ರವರೆಗೆ ಮಾತ್ರ ಲಭ್ಯವಿರುತ್ತದೆ. ಅಪಾರ್ಟ್ ಮೆಂಟ್ ನ ದರ ಕನಿಷ್ಠ 35 ಲಕ್ಷ ರೂ.ನಿಂದ ಪಾರಂಭವಾಗುತ್ತದೆ.

ಕರಾವಳಿ ಕರ್ನಾಟಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಇನ್-ಲ್ಯಾಂಡ್ ಬಿಲ್ಡರ್ಸ್ ನಿರಂತರವಾಗಿ ವಿಕಸನಗೊಳ್ಳಲು ಕಟ್ಟಡ ನಿರ್ಮಾಣದಲ್ಲಿನ ಗುಣಮಟ್ಟ, ನವೀನತೆ, ಬದ್ಧತೆ ಹಾಗೂ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವೈಶಿಷ್ಟ್ಯಗೊಳಿಸಲ್ಪಟ್ಟ ವಿನೂತನ ಯೋಜನೆಗಳು ಅಲ್ಲದೇ ಸಂಸ್ಥೆಯ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಸಮರ್ಪಕವಾದ ನೇತೃತ್ವ, ಕಾರ್ಯಕ್ಷಮತೆ ಮತ್ತು ಮುಂದಾಳತ್ವ ಕಾರಣವಾಗಿದೆ. ಅಲ್ಲದೇ ಅತ್ಯುತ್ತಮ ಗುಣಮಟ್ಟದ ಹಲವು ಪ್ರತಿಷ್ಠಿತ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಆಕರ್ಷಕ ವಿನ್ಯಾಸದಲ್ಲಿ ನಿರ್ಮಿಸಿ ಅಪಾರ ಗ್ರಾಹಕ ಬಂಧುಗಳ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆದಿದೆ. ಕರಾವಳಿಯ ವಸತಿ ಸಮುಚ್ಚಯ ನಿರ್ಮಾಣ ಮಾರುಕಟ್ಟೆಯಲ್ಲಿ ವಿನೂತನ ವಿನ್ಯಾಸ, ನಿರ್ಮಾಣ ಹಾಗೂ ಮಾರುಕಟ್ಟೆಯ ಹೊಸ ಪರಿಕಲ್ಪನೆಗಳನ್ನು ಆರಂಭಿಸುವ ಗ್ರಾಹಕರ ಕೇಂದ್ರಿತ ಕಂಪೆನಿ ಎಂಬ ಮನ್ನಣೆಗೆ ಇನ್-ಲ್ಯಾಂಡ್ ಬಿಲ್ಡರ್ಸ್ ಪಾತ್ರವಾಗಿದೆ.

ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಕ್ಕೆ ದುಬಾರಿ ಬೆಲೆ ನೀಡಬೇಕಾಗಿಲ್ಲ ಎಂಬುದನ್ನು ಇನ್ಲ್ಯಾಂಡ್ ಸನ್‌ಲೈಟ್-ಮೂನ್‌ಲೈಟ್ ವಿನ್ಯಾಸವು ಸಾಬೀತುಪಡಿಸುತ್ತದೆ. ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಕೂಳೂರು-ಕಾವೂರು ಅತ್ಯಂತ ವೇಗವಾಗಿ ಅಭಿವೃದ್ದಿಯಾಗುತ್ತಿರುವ ವಸತಿ ಪ್ರದೇಶವಾಗಿದೆ. ಮಂಗಳೂರಿನ ಪ್ರಮುಖ ಸಂಸ್ಥೆಗಳಾಗಿರುವ ಎಂಆರ್‌ಪಿಲ್, ಎಂಸಿಎಫ್, ಎಎಐ, ಎನ್‌ಎಂಪಿಟಿ, ಡಾ.ಎಂ.ವಿ.ಶೆಟ್ಟಿ ಕಾಲೇಜು ಮತ್ತು ಕರಾವಳಿ ಕಾಲೇಜುಗಳಿಂದ ಸುತ್ತುವರಿದಿರುವ ಈ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಗಳು  ಬಾಡಿಗೆಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ ಮತ್ತು ಸುರಕ್ಷಿತ ಹಾಗೂ ಅಧಿಕ ಆದಾಯದ ಆಸ್ತಿಗಾಗಿ ಹೂಡಿಕೆ ಮಾಡಲು ಸೂಕ್ತವಾಗಿದೆ. ಮೊದಲ ಬಾರಿಗೆ ಫ್ಲ್ಯಾಟ್ ಖರೀದಿಸುವರಿಗೆ ಮತ್ತು ಹೂಡಿಕೆದಾರರಿಗೆ ತಮ್ಮ ಬಜೆಟ್ ಗೆ ಹೊಂದುವಂತಹ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಇನ್‌ಲ್ಯಾಂಡ್ ಸಂಸ್ಥೆಯು ಕಟ್ಟಡ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ಉದ್ದೇಶಪೂರ್ವಕವಾಗಿಯೇ ಗ್ರಾಹಕರಿಗೆ ಕೈಗೆಟುಕುವ ದರವನ್ನು ನಿಗದಿಪಡಿಸಿದ್ದೇವೆ ಎಂದು ಸಿರಾಜ್ ಅಹ್ಮದ್  ತಿಳಿಸಿದ್ದಾರೆ.

ಕೂಳೂರು-ಕಾವೂರಿನ ಪ್ರಮುಖ ರಸ್ತೆಯಲ್ಲಿ ಇರುವ ಇನ್‌ಲ್ಯಾಂಡ್ ಸನ್‌ಲೈಟ್-ಮೂನ್‌ಲೈಟ್ ಉಡುಪಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ಪೊದಾರ್ ಇಂಟರ್ ನ್ಯಾಶನಲ್ ಸ್ಕೂಲ್ ಮತ್ತು ಬಿಜಿಎಸ್ ನಂತಹ ಉತ್ತಮ ಗುಣಮಟ್ಟದ ಶಾಲೆಗಳು ಹಾಗೂ ಕಾವೂರಿನ ಶಾಪಿಂಗ್ ಮಾರುಕಟ್ಟೆಗಳಿಗೆ ಸಮೀಪದಲ್ಲಿದೆ. ನೇರವಾಗಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ದ್ವಿಪಥ ರಸ್ತೆಯೊಂದಿಗೆ ಬಸ್ಸು, ಟ್ಯಾಕ್ಸಿ ಮತ್ತು ಆಟೋ ಸಾರಿಗೆಯನ್ನು ಈ ಪ್ರದೇಶವು ಹೊಂದಿದೆ.

ಈ ವಸತಿ ಸಮುಚ್ಚಯದಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಏರ್‌ ಇಂಡಿಯಾ, ಎಂಆರ್‌ಪಿಲ್ ಹಾಗೂ ಇತರ ಸಂಯೋಜಿತ ಕಂಪನಿಗಳ ಸಿಬ್ಬಂದಿ ಮತ್ತು ಗಲ್ಫ್ ಹೂಡಿಕೆದಾರರು ಈಗಾಗಲೇ ಅಪಾರ್ಟ್ ಮೆಂಟ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಈ ಮೂಲಕ ಸುಮಾರು 65 ಶೇ.ದಷ್ಟು ಫ್ಲ್ಯಾಟ್ ಗಳ ಖರೀದಿಯಾಗಿದೆ ಎಂದು ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

ಇನ್‌ಲ್ಯಾಂಡ್ ಸಂಸ್ಥೆಯು ಮಂಗಳೂರಿನ ಫಳ್ನೀರ್, ಕದ್ರಿ, ಬಿಜೈ, ವಿಮಾನ ನಿಲ್ದಾಣ ರಸ್ತೆ, ಬಂಟ್ಸ್ ಹಾಸ್ಟೆಲ್ ಕೂಳೂರು-ಕಾವೂರು ರಸ್ತೆ, ಉಳ್ಳಾಲ, ಪುತ್ತೂರು ಮತ್ತು ಬೆಂಗಳೂರಿನ ಯಲಹಂಕ ಮೊದಲಾದ ಪ್ರಮುಖ ಸ್ಥಳಗಳಲ್ಲಿ ಯಶಸ್ವಿ ಯೋಜನೆಗಳನ್ನು ನಿರ್ಮಿಸಿದೆ.

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: www.inlandbuilders.net, ಇ-ಮೇಲ್: mktg.mlr@inlandbuilders.net, ಮೊ.ಸಂ.: 9880138015, 8197168444, 9972089099, 9972014055 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.


   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News