ಮಂಗಳೂರು: ಶಕ್ತಿ ಕೋಚಿಂಗ್ ಅಕಾಡೆಮಿ ಉದ್ಘಾಟನೆ
ಮಂಗಳೂರು, ಫೆ.7: ನಗರದ ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್ ಕಟ್ಟಡದಲ್ಲಿ ಆರಂಭಗೊಂಡಿರುವ ಶಕ್ತಿ ಕೋಚಿಂಗ್ ಅಕಾಡೆಮಿ ೆ. 11ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ.
ಮಂಗಳೂರಿನ ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊಘಿ.ಎಂ.ಬಿ. ಪುರಾಣಿಕ್ ಅಕಾಡೆಮಿ ಉದ್ಘಾಟಿಸುವರು. ಮೇಯರ್ ಭಾಸ್ಕರ್ ಕೆ., ಮನಪಾ ಸದಸ್ಯೆ ಸಬಿತಾ ಮಿಸ್ಕಿತ್, ದ.ಕ. ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ. ಉಪಾಧ್ಯಾಯ ಅತಿಥಿಯಾಗಿ ಭಾಗವಹಿಸುವರು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಸಿ. ನಾಯ್ಕೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಕ್ತಿ ಕೋಚಿಂಗ್ ಅಕಾಡೆಮಿ ಅನುಭವಿ ಶಿಕ್ಷಕರನ್ನು ಹೊಂದಿದ್ದು, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ (ರಾಜ್ಯ ಹಾಗೂ ಸಿಬಿಎಸ್‌ಇ ಪಠ್ಯಕ್ರಮ) ವಿದ್ಯಾರ್ಥಿಗಳಿಗೆ ರಜಾ ಕಾಲದಲ್ಲಿ ವಿಶೇಷ ಕೋಚಿಂಗ್ ಹಾಗೂ ನಿರಂತರ ಕೋಚಿಂಗ್ ತರಗತಿ ನಡೆಸಲಾಗುವುದು. ಸಿಇಟಿ ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಿ ಪಾಠ ಮಾಡಲಾಗುವುದು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಗುರಿಯಾಗಿಟ್ಟುಕೊಂಡು ವೈಯಕ್ತಿಕ ಗಮನ ನೀಡಿ ಬೋಧನೆ ನಡೆಸುವುದೇ ನಮ್ಮ ಆಶಯ ಎಂದರು.
ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್ ಕಟ್ಟಡದಲ್ಲಿರುವ ಶಕ್ತಿ ಕೋಚಿಂಗ್ ಅಕಾಡೆಮಿಯಲ್ಲಿ ಇನ್ನು ಮುಂದಕ್ಕೆ ನಿರಂತರವಾಗಿ ನಡೆಯಲಿದೆ. ಮುಂದೆ ಕೆಎಎಸ್, ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ನಮ್ಮ ಉದ್ದೇಶ. ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಬೋಧನೆ ಶಕ್ತಿ ಕೋಚಿಂಗ್ ಅಕಾೆಮಿ ವೈಶಿಷ್ಟ್ಯ ಎಂದು ವಿವರಿಸಿದರು.
ಶಕ್ತಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಶಕ್ತಿ ಕೋಚಿಂಗ್‌ನಲ್ಲಿ ಅವಕಾಶವಿದೆ. ರಜಾಕಾಲ, ಶನಿವಾರ ಮತ್ತು ಭಾನುವಾರ ಹಾಗೂ ಪ್ರತಿದಿನದ ಬ್ಯಾಚ್‌ನಲ್ಲಿ ಕೋಚಿಂಗ್ ನಡೆಯಲಿದೆ. ಬ್ಯಾಂಕ್, ಎಲ್‌ಐಸಿ ಸಹಿತ ಎಲ್ಲ ವಿಧದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೋಚಿಂಗ್ ನೀಡಲಾಗುವುದು. ನಮ್ಮ ಪ್ರಾಧ್ಯಾಪಕರೇ ನೋಟ್ಸ್ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುತ್ತಾರೆ. 20 ವರ್ಷ ಬೋಧನಾನುಭವ ಇರುವ ಪ್ರಾಧ್ಯಾಪಕರು ಇದ್ದಾರೆ. ಜತೆಗೆ ಸಂದರ್ಶಕ ಪ್ರಾಧ್ಯಾಪಕರೂ ಆಗಮಿಸಲಿದ್ದಾರೆ ಎಂದರು.
ಅಕಾಡೆಮಿ ಕೋ ಆರ್ಡಿನೇಟರ್‌ಗಳಾದ ಸುಧೀರ್ ಎಂ.ಎಸ್., ಡಾ. ದರ್ಶನ್‌ರಾಜ್, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲ ಪ್ರಭಾಕರ ಜಿ.ಎಸ್. ಉಪಸ್ಥಿತರಿದ್ದರು.