ಎಕ್ಸಲೆಂಟ್ ಮೂಡಬಿದಿರೆ: ಜೆ.ಇ.ಇ ಬಿ-ಆರ್ಕ್ ಅತ್ಯುತ್ತಮ ಫಲಿತಾಂಶ
ಮೂಡುಬಿದಿರೆ, ಫೆ. 7: ಎನ್ ಐ ಟಿಗಳಲ್ಲಿ ಅರ್ಕಿಟೆಕ್ಚರ್ ಇಂಜಿನಿಯರಿಂಗ್ ಪ್ರವೇಶಾತಿಗಾಗಿ ನಡೆದ ರಾಷ್ಟ್ರಮಟ್ಟದ ಜೆ ಇ ಇ ಬಿ-ಆರ್ಕ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ 21 ವಿದ್ಯಾರ್ಥಿಗಳು ಶೇ 90 ಪರ್ಸಂಟೈಲ್‍ಗಿಂತ ಅಧಿಕ ಫಲಿತಾಂಶ ಗಳಿಸಿರುತ್ತಾರೆ.
ವಿದ್ಯಾರ್ಥಿಗಳಾದ ಗಾನಶ್ರೀ, ಕೀರ್ತಿ ಬಿ.ಎನ್.ಸಿ., ಹರ್ಷಿತಾ ಕೆ.ಸಿ., ನಿರೀಕ್ಷಾ ಎಮ್.ಎಸ್, ಉಜ್ವಲ್ ವೈ, ತನ್ವಿ, ಧನ್ಯಶ್ರೀ, ಸಹನ ಎನ್ ಜೈನ್, ಕೀರ್ಥನ, ಚಂದನ್ ಎಮ್ ಗೌಡ, ಸ್ಮಿತ ಜಿ ಎ, ಅಕ್ಷರ್ ಕೆ ಹೆಚ್, ಅಭಿಷೇಕ್ ಅರಬಲಿ, ವೈಭವ್ ಎಮ್ ಐ, ಪ್ರಕೃತಿ, ಸುಮಂತ್, ಅಕ್ಷಯ್ ಶೆಟ್ಟರ್, ಸಹನ, ನಿನಾದ, ಅನ್ವಿತಾ, ಸೂರಜ್ ಪಿ ದೇವಾಡಿಗ ಇವರು 90ಕ್ಕಿಂತಲೂ ಹೆಚ್ಚಿನ ಶೇಕಡ ಪಡೆದಿರುತ್ತಾರೆ.
ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಉಪನ್ಯಾಸಕ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.